Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

1999ರ ಕಾರ್ಗಿಲ್ ಯುದ್ಧ ಯಾರಾದರೂ ಮರೆಯುವುದುಂಟೆ

1999ರ ಕಾರ್ಗಿಲ್ ಯುದ್ಧ ಯಾರಾದರೂ ಮರೆಯುವುದುಂಟೆ
ಬೆಂಗಳೂರು , ಶುಕ್ರವಾರ, 24 ಜುಲೈ 2020 (21:24 IST)
ಪಾಕಿಸ್ತಾನ ಯಾವತ್ತೂ ತನ್ನ ಕುಕೃತ್ಯವನ್ನು ತೋರದೆ ಇರದು. ಶಾಂತವಾಗಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಭಾರತ ದೇಶದ ಮೇಲೆ ನಿರಂತರ ಪ್ರತಿಕಾರ ಕಾರುವುದು ಆ ದೇಶದ ಹುಟ್ಟು ಗುಣವಾಗಿದೆ. ಕಾಶ್ಮಿರದ ಕಾರ್ಗಿಲ್ ಜಿಲ್ಲೆಯಲ್ಲಿರುವ ನಿಯಂತ್ರಣ ರೇಖೆಯ ಗಡಿ ಬಳಿ 1999ರ ಮೇ ತಿಂಗಳಲ್ಲಿ ಇದ್ದಕಿದ್ದಂತೆ ಉದ್ರಿಕ್ತ ವಾತಾವರಣ ಕಾಣಿಸಿಕೊಂಡಿತು. 
ಕಾರ್ಗಿಲ್‌ನಲ್ಲಿರುವ ಗಡಿರೇಖೆಯೊಳಗೆ ಪಾಕಿಸ್ತಾನದ ಸೇನೆ ತಾನು ನುಗ್ಗಿದ್ದಲ್ಲದೇ ಉಗ್ರರನ್ನು ನುಗ್ಗಿಸಿ ಅಟ್ಟಹಾಸ ಮೆರೆಯಿತು. ಆರಂಭದಲ್ಲಿ ಇದೊಂದು ಉಗ್ರರ ಕಾಟ ಎಂದು ಭಾವಿಸಲಾಗಿತ್ತು. ಪಾಕಿಸ್ತಾನ ಕೂಡಾ ತಮ್ಮ ಯಾವುದೇ ಸೈನಿಕರು ಗಡಿಯೊಳಗೆ ನುಗಿಲ್ಲ. ಇದೆಲ್ಲಾ ಭಾರತ ಸರಕಾರದ ಕುಚ್ಯೋದ್ಯದ ಆರೋಪ ಎಂದು ತಿರುಗೇಟು ನೀಡಿತ್ತು.
 
ತದನಂತರ ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಬಣ್ಣ ಬಯಲಾಯಿತು. ಪಾಕಿಸ್ತಾನದ ಸೈನಿಕರು ಕಾರ್ಗಿಲ್‌ನಲ್ಲಿ ಗುಂಡಿನ ಸುರಿಮಳೆಗೈಯುತ್ತಿರುವುದು ಕಂಡು ಬಂದಿತು.ಪಾಕಿಸ್ತಾನದ ಕೂಟ ನೀತಿಯಿಂದ ಶಾಕ್ ಗೊಂಡ ಭಾರತೀಯ ಸೇನೆ, ಕಾರ್ಗಿಲ್‌ಗೆ ನುಗ್ಗಿ ಪಾಕಿಸ್ತಾನ ಸೇನೆಯನ್ನು ಸದೆಬಡೆಯಿತು.
 
ಪಾಕಿಸ್ತಾನದ ಪಡೆಗಳು ಮತ್ತು ಉಗ್ರಗಾಮಿಗಳು ಗಡಿಯಲ್ಲಿ ಆಕ್ರಮಿಸಿಕೊಂಡ ಭಾರತದ ಬಹುತೇಕ ನೆಲೆಗಳನ್ನು ಬಳಿಕ ಭಾರತದ ಸೇನೆಯು ಭಾರತೀಯ ವಾಯು ಪಡೆಯ ಬೆಂಬಲದೊಂದಿಗೆ ಮರುವಶಕ್ಕೆ ತೆಗೆದುಕೊಂಡಿತು. ಅಂತಾರಾಷ್ಟ್ರೀಯವಾಗಿ ರಾಜತಾಂತ್ರಿಕ ವಿರೋಧ ವ್ಯಕ್ತವಾಗಿದ್ದರಿಂದಾಗಿ, ಪಾಕಿಸ್ತಾನದ ಪಡೆಗಳು ಗಡಿಯ ಭಾರತದ ನೆಲೆಗಳಿಂದ ಬಲವಂತವಾಗಿ ಹಿಂದಕ್ಕೆ ಸರಿಯಬೇಕಾಯಿತು.
 
ಜುಲೈ 26 ರಂದು ಭಾರತೀಯ ಸೇನೆ ಪಾಕಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ವಿಜಯ ಪತಾಕೆ ಹಾರಿಸಿತು. ಅಂದಿನಿಂದ ಜುಲೈ 26 ರಂದು ಭಾರತೀಯ ಸೇನೆ ಕಾರ್ಗಿಲ್ ವಿಜಯೋತ್ವವ ಆಚರಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡೆಡ್ಲಿ ಕೊರೊನಾಕ್ಕೆ ಒಂದೇ ದಿನ 110 ಬಲಿ, 5 ಸಾವಿರ ಗಡಿ ದಾಟಿದ ಪಾಸಿಟಿವ್