Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೃಹತ್ ನಂದಿ ವಿಗ್ರಹದ ನೆಲೆ ಬಸವನಗುಡಿ

ಬೃಹತ್ ನಂದಿ ವಿಗ್ರಹದ ನೆಲೆ ಬಸವನಗುಡಿ
ಬೆಂಗಳೂರು , ಶುಕ್ರವಾರ, 24 ಜೂನ್ 2016 (20:22 IST)
ಬಸವನಗುಡಿ ಧಾರ್ಮಿಕ ಮಂದಿರವಾಗಿದ್ದು, ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯ ದಕ್ಷಿಣ ಕೊನೆಯಲ್ಲಿ ಬಸವನಗುಡಿ ನೆಲೆಗೊಂಡಿದೆ.  ಬಸವನಗುಡಿ ಎಂಬ ಪದವು ಬಸವನಿಂದ ಜನ್ಯವಾಗಿದ್ದು, ಇದರ ಅರ್ಥ ನಂದಿ. ಮಂದಿರದ ವಿಶೇಷ ಆಕರ್ಷಣೆ ಬಸವನ ಬೃಹತ್ ಮೂರ್ತಿ. ಕ್ರಿ.ಶ. 1537ರಲ್ಲಿ ಈ ದೇವಾಲಯವನ್ನು ಕೆಂಪೇಗೌಡ ಕಟ್ಟಿಸಿದನೆಂದು ಹೇಳಲಾಗಿದೆ. ದೊಡ್ಡ ಬೆಟ್ಟದ ಮೇಲಿರುವ ಈ ಮಂದಿರವನ್ನು ಸ್ಥಳೀಯ ಬಸ್‌, ಟ್ಯಾಕ್ಸಿಗಳ ಮೂಲಕ ತಲುಪಬಹುದು.
 
ದೇವಾಲಯದಲ್ಲಿ ನಂದಿಯ ಬೃಹತ್ ಮೂರ್ತಿಯಿದ್ದು, 5 ಮೀಟರ್ ಎತ್ತರ ಮತ್ತು 6 ಮೀಟರ್ ಅಗಲವಿದೆ. ದೇವಾಲಯಕ್ಕಿಂತ ನಂದಿ ವಿಗ್ರಹವು ಹಳೆಯದೆಂದು ನಂಬಲಾಗಿದೆ.
 
ಏಕ ಗ್ರಾನೈಟ್ ಶಿಲೆಯಲ್ಲಿ ನಂದಿ ವಿಗ್ರಹವನ್ನು ಕೆತ್ತಲಾಗಿದ್ದು ಆರಂಭದಲ್ಲಿ ಇದರ ಬಣ್ಣ ಕಂದಾಗಿತ್ತು.  ಭಕ್ತರು ಕೊಬ್ಬರಿ ಎಣ್ಣೆ ಲೇಪಿಸಿದ್ದರಿಂದ ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗಿತು.  ವಿಶ್ವಭಾರತಿ ನದಿ ನಂದಿಯ ಪಾದದಿಂದ ಉಗಮವಾಗಿದೆ ಎಂಬ ಪ್ರತೀತಿಯಿದೆ.  ನಂದಿಯ ಮೂರ್ತಿಯ ಹಿಂದೆ ಶಿವಲಿಂಗವಿದೆ. ಭಾರತದ ಅನೇಕ ದೇವಾಲಯಗಳ ರೀತಿ ಬಸವನಗುಡಿ ಸ್ಥಾಪನೆಯ ಹಿಂದೆಯೂ ಒಂದು ಕಥೆಯಿದೆ. ಅಲ್ಲಿ ಜಮೀನುಗಳಲ್ಲಿ ಬೆಳೆದಿದ್ದ ಕಡಲೆಕಾಯಿ ಬೆಳೆಗಳನ್ನು ನಾಶಮಾಡುತ್ತಿದ್ದ ನಂದಿಯನ್ನು ಸಂತೃಪ್ತಿಪಡಿಸಲು ಈ ದೇವಾಲಯ ನಿರ್ಮಿಸಲಾಯಿತೆಂಬ ಪ್ರತೀತಿಯಿದೆ.

ಈ ಪ್ರತಿಮೆಯು ಗಾತ್ರದಲ್ಲಿ ಬೆಳೆಯುತ್ತಾ ಹೋಯಿತೆಂದೂ ನಂದಿಯ ಬೆಳವಣಿಗೆಯನ್ನು ತಡೆಯಲು  ಹಣೆಯ ಮೇಲೆ ತ್ರಿಶೂಲವನ್ನು ಇರಿಸುವಂತೆ ಭಗವಾನ್ ಶಿವನ ಆಜ್ಞೆಯನ್ನು ಪಾಲಿಸಲಾಯಿತೆಂದು ಹೇಳಲಾಗುತ್ತಿದೆ. 
 
 ಬಸವನಗುಡಿ ಕಡಲೆಕಾಯಿ ಪರಿಷೆಗೆ ಜನಪ್ರಿಯವಾಗಿದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಪರಿಷೆ ನಡೆಯುತ್ತದೆ. ಈ ಪರಿಷೆಯಲ್ಲಿ ರೈತರು ನಂದಿಗೆ ಕಡಲೆಕಾಯಿಯ ಮೊದಲ ಬೆಳೆಯನ್ನು ಅರ್ಪಿಸುತ್ತಾರೆ.  ಇದು ನಂದಿಗೆ ರೈತರು ತೋರುವ  ಮೆಚ್ಚುಗೆ ಮತ್ತು ಕೃತಜ್ಞತೆಯಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಟೀಲಿನ ದುರ್ಗಾಪರಮೇಶ್ವರಿ ದೇವಾಲಯ