Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಏಪ್ರಿಲ್ 14 ರಂದು ಭದ್ರಾಚಲರಾಮನ ಕಲ್ಯಾಣೋತ್ಸವ.. 6 ರಿಂದ ಬ್ರಹ್ಮೋತ್ಸವಗಳು

ಏಪ್ರಿಲ್ 14 ರಂದು ಭದ್ರಾಚಲರಾಮನ ಕಲ್ಯಾಣೋತ್ಸವ.. 6 ರಿಂದ ಬ್ರಹ್ಮೋತ್ಸವಗಳು
bhadrachala , ಬುಧವಾರ, 13 ಮಾರ್ಚ್ 2019 (13:52 IST)
ಪ್ರಮುಖ ಪುಣ್ಯಕ್ಷೇತ್ರ ಭದ್ರಾಚಲದಲ್ಲಿ ಶ್ರೀಸೀತಾರಾಮಚಂದ್ರಸ್ವಾಮಿಗಳ ಬ್ರಹ್ಮೋತ್ಸವಗಳು ಚೈತ್ರಶುದ್ಧ ಪಾಡ್ಯ ಯುಗಾದಿಯ ದಿನ (ಏಪ್ರಿಲ್ 6) ರಂದು ಪ್ರಾರಂಭವಾಗಿ ಏಪ್ರಿಲ್ 20 ತನಕ ನೆರವೇರುತ್ತದೆ. ಈ ಪುಣ್ಯಕ್ಷೇತ್ರದ ವೇದ ಪಂಡಿತರು, ಅರ್ಚಕರು ಮುಹೂರ್ತವನ್ನು ಖಾಯಂಗೊಳಿಸಿದ್ದಾರೆ.

ಏಪ್ರಿಲ್ 6 ರಿಂದ 20 ತನಕ ಶ್ರೀ ರಾಮನವಮಿ ಬ್ರಹ್ಮೋತ್ಸವನ್ನು ನಡೆಸಲು ನಿರ್ಧರಿಸಿದ್ದಾರೆ. ಏಪ್ರಿಲ್ 14 ನವಮಿ ದಿನದಂದು ಸೀತಾರಾಮರ ಕಲ್ಯಾಣ, 15ನೇ ತಾರೀಖು ಮಹಾ ಪಟ್ಟಾಭಿಷೇಕ ಜರಗುತ್ತದೆ. ಈ ಸೀತಾರಾಮರ ಕಲ್ಯಾಣವನ್ನು ಭಕ್ತರು ಕಣ್ತುಂಬಿಕೊಳ್ಳಲು ಮಿಥಿಲಾ ಪ್ರಾಂಗಣದಲ್ಲಿ ಅಧಿಕಾರಿಗಳು ಏರ್ಪಾಟು ಮಾಡುತ್ತಿದ್ದಾರೆ.
 
ರೂ. 5 ಸಾವಿರ, ರೂ.2 ಸಾವಿರ, ಇತ್ಯಾದಿ ಟಿಕೇಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದೆಂದು ಆಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಬ್ರಹ್ಮೋತ್ಸವಗಳ ಸಿದ್ಧತೆಗಳಿಗೆ ಸಂಬಂಧಿಸಿದಂತೆ ರೂ. 85 ಲಕ್ಷ ವೆಚ್ಚದಲ್ಲಿ ಬಹಳಷ್ಟು ಕಾರ್ಯಗಳಿಗೆ ಹೇಳಿದ್ದಾರೆ. ಬ್ಯಾರಿಕೇಡ್‌ಗಳು, ಚಪ್ಪರಗಳು, ಕಲ್ಯಾಣೋತ್ಸವ ಸಿದ್ಧತೆಗಳು, ಪ್ರಸಾದ ವಿನಿಯೋಗ, ಗೋದಾವರಿಯಲ್ಲಿ ಸ್ನಾನ ಘಟ್ಟಗಳಲ್ಲಿ ಭದ್ರತೆ, ಪೋಲೀಸು ಬಂದೋಬಸ್ತು, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಇಂತಹ ಹಲವಾರು ಅನುಕೂಲತೆಗಳ ಕಡೆಗೆ ಅಧಿಕಾರಿಗಳು ದೃಷ್ಟಿವಹಿಸಿದ್ದಾರೆ.
 
ಏಪ್ರಿಲ್ 14 ರಂದು ಕಲ್ಯಾಣಕ್ಕಾಗಿ ವೈದಿಕ ಕಮಿಟಿ ಮುಹೂರ್ತ ನಿರ್ಣಯದೊಂದಿಗೆ ಶ್ರೀರಾಮನವಮಿಯನ್ನು ಜ್ಞಾಪಕದಲ್ಲಿಟ್ಟುಕೊಂಡು ಶ್ರೀ ಕಲ್ಯಾಣ ಬ್ರಹ್ಮೋತ್ಸವಗಳ ನಿಗದಿತ ಅವಧಿಯನ್ನು ಕೂಡ ಪ್ರಕಟಿಸಿದೆ. ಏಪ್ರಿಲ್ 6 ರಿಂದ 20 ತನಕ ವಸಂತಪಕ್ಷ ಪ್ರಯುಕ್ತ ಶ್ರೀರಾಮನವಮಿ ಕಲ್ಯಾಮ ಬ್ರಹ್ಮೋತ್ಸವಗಳು ನಡೆಯುತ್ತವೆ. ಏಪ್ರಿಲ್ 6ರಂದು ವಿಕಾರಿ ನಾಮ ಸಂವತ್ಸರ ಯುಗಾದಿಯನ್ನು ಗಮನದಲ್ಲಿಟ್ಟುಕೊಂಡು ನೂತನ ಪಂಚಾಂಗ ಶ್ರವಣ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಏಪ್ರಿಲ್ 10 ರಂದು ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣೆ, ಮಂಡಪ ವಾಸ್ತು ಹೋಮ. ಏಪ್ರಿಲ್ 11ರಂದು ಗರುಡ ಅದಿವಾಸ, 12ರಂದು ಅಗ್ನಿ ಮುಖ, ಅಗ್ನಿಪ್ರತಿಷ್ಟ, ಧ್ವಜಾರೋಹಣ, ದೇವತಾವಾಹನ, 13ರಂದು ಎದುರುಗೊಳ್ಳು ಉತ್ಸವ, ಗರುಡ ಸೇವೆ, 14ರಂದು ಶ್ರೀಸೀತಾರಾಮರ ಕಲ್ಯಾಣ, 15 ರಂದು ಮಹಾಪಟ್ಟಾಭಿಷೇಕ, 16ರಂದು ಸದಸ್ಯಂ, 20ರಂದು ಧ್ವಜಾರೋಹಣ ಮತ್ತಿತ್ತರ ಕಾರ್ಯಕ್ರಮಗಳು ನೆರವೇರುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿಟಿಡಿ: ಶ್ರೀವಾರಿ ಆಲಯದಲ್ಲಿ ಇಂದು ಮಹಾ ಕುಂಭಾಭಿಷೇಕ