Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೊಸರು ಕೋಡುಬಳೆ

ಮೊಸರು ಕೋಡುಬಳೆ
ಬೆಂಗಳೂರು , ಬುಧವಾರ, 13 ಮಾರ್ಚ್ 2019 (14:26 IST)
ಹಬ್ಬ ಎಂದರೆ ಸಡಗರ ಅದರಲ್ಲಿಯೂ ವೈವಿಧ್ಯಮಯವಾದ ತಿಂಡಿ ತಿನಿಸುಗಳಿದ್ದರೆ ಹಬ್ಬಕ್ಕೆ ಮೆರಗು ಜಾಸ್ತಿ. ಅಂತಹ ದಿಡೀರ್ ಮಾಡುವಂತಹ, ರುಚಿಕರವಾದ, ಆರೋಗ್ಯಕರವಾದ ತಿನಿಸುಗಳ ಪಟ್ಟಿಗೆ ಕೋಡುಬಳೆ ಸೇರುತ್ತದೆ ಎಂದರೆ ತಪ್ಪಾಗಲಾರದು. ಅದನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಿ ಚಿಕ್ಕಮಕ್ಕಳಿಗೆ ಸಾಯಂಕಾಲದ ಸಮಯದಲ್ಲಿ ತಿನ್ನಲು ಕೊಡಬಹುದು. ಇದು ಟೀ ಅಥವಾ ಕಾಫಿಯ ಜೊತೆಯೂ ಸೇವಿಸಲು ಚೆನ್ನಾಗಿರುತ್ತದೆ. ಹಾಗಾದರೆ ಮೊಸರು ಕೋಡುಬಳೆಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ..
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಗಟ್ಟಿ ಮೊಸರು ಅರ್ಧ ಲೀಟರ್
* ಅಕ್ಕಿ ಹಿಟ್ಟು ಅರ್ಧ ಪಾವು
* ಜೀರಿಗೆ ಎರಡು ಚಮಚ
* ಹಸಿಮೆಣಸಿನಕಾಯಿ 10-12
* ಇಂಗು ಸ್ವಲ್ಪ
* ಕೊತ್ತಂಬರಿ ಸೊಪ್ಪು 2 ಕಟ್ಟು
* ಕಡಲೆಬೇಳೆ 3 ರಿಂದ 4 ಚಮಚ
* ರುಚಿಗೆ ತಕ್ಕಷ್ಚು ಉಪ್ಪು
* ಕರಿಯಲು ಎಣ್ಣೆ
 
      ತಯಾರಿಸುವ ವಿಧಾನ:
   ಮೊದಲು ಹಸಿಮೆಣಸಿನಕಾಯಿಯನ್ನು ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಟ್ಟುಕೊಂಡು ಮೊಸರನ್ನು ತೆಳ್ಳಗೆ ಮಾಡಿಕೊಳ್ಳಬೇಕು. ನಂತರ ಒಂದು ಪಾತ್ರಯಲ್ಲಿ ಮಜ್ಜಿಗೆಯನ್ನು ಹಾಕಿ ಹಸಿಮೆಣಸಿನಕಾಯಿ ಪೇಸ್ಟ್ ಅನ್ನು ಹಾಕಿ ಅದಕ್ಕೆ ಉಪ್ಪು, ಕಡಲೆಬೇಳೆ, ಇಂಗು ಈಗಾಗಲೇ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಎಲ್ಲವನ್ನೂ ಸೇರಿಸಿ ಒಲೆಯ ಮೇಲಿಟ್ಟು ಕುದಿ ಬಂದ ಮೇಲೆ ಅಕ್ಕಿಹಿಟ್ಟನ್ನು ಹಾಕಿ 5 ನಿಮಿಷ ಅದನ್ನು ಸಣ್ಣ ಉರಿಯಲ್ಲಿಟ್ಟು ಇಳಿಸಿ ಚೆನ್ನಾಗಿ ಕಲೆಸಿ ಅದು ತಣ್ಣಗಾದ ನಂತರ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಬೇಕು. ನಂತರ ಕೋಡುಬಳೆಯ ತರಹ ತೀಡಿಕೊಂಡು ಎಣ್ಣೆಯಲ್ಲಿ ಹಾಕಿ ಎರಡೂ ಬದಿಯಲ್ಲಿ ಬೇಯಿಸಬೇಕು. ಈಗ ಬಿಸಿ ಬಿಸಿಯಾದ ರುಚಿ ರುಚಿಯಾದ ಮೊಸರು ಕೋಡುಬಳೆ ಸವಿಯಲು ಸಿದ್ಧ. 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಎರಿಯಪ್ಪ ಮಾಡುವುದು ಹೇಗೆ ಎಂಬುದು ತಿಳಿದಿದೆಯೇ?