ಬೆಂಗಳೂರು: ಬೂದುಗುಂಬಳ ಕಾಯಿ ಸಾಂಬಾರ್, ಪಲ್ಯ ಎಲ್ಲರಿಗೂ ಗೊತ್ತು. ಇದು ಅಧಿಕ ನೀರಿನಂಶ ಇರುವ ತರಕಾರಿಯಾದ್ದರಿಂದ ಯಾವುದೇ ಆರೋಗ್ಯ ಸಮಸ್ಯೆ ಇರುವವರಿಗೂ ಅಡ್ಡ ಪರಿಣಾಮ ಬೀರದು. ಇದರ ದೋಸೆ ತಯಾರಿಸಿದರೆ ಅದಕ್ಕೊಂದು ವಿಶೇಷ ಘಮವಿರುತ್ತದೆ. ಅದನ್ನು ಮಾಡುವುದು ಹೇಗೆಂದು ನೋಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಬೂದುಗುಂಬಳಕಾಯಿ
ಬೆಳ್ತಿಗೆ ಅಕ್ಕಿ
ಉಪ್ಪು
ಎಣ್ಣೆ
ಮಾಡುವ ವಿಧಾನ
ಬೆಳ್ತಿಗೆ ಅಕ್ಕಿಯನ್ನು ಮೊದಲೇ ನೆನೆ ಹಾಕಿ. ನೆನೆದ ಅಕ್ಕಿಯನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಕುಂಬಳಕಾಯಿ ಹೋಳುಗಳನ್ನು ಸೇರಿಸಿಕೊಂಡು ಮತ್ತಷ್ಟು ನುಣ್ಣಗೆ ರುಬ್ಬಿಕೊಳ್ಳಿ. ತಯಾರಾದ ಹಿಟ್ಟನ್ನು ಕಾದ ಕಾವಲಿ ಮೇಲೆ ಎಣ್ಣೆ ಸವರಿಕೊಂಡು ಹುಯ್ದರೆ ಕುಂಬಳಕಾಯಿ ದೋಸೆ ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ