Webdunia - Bharat's app for daily news and videos

Install App

ಚಪಾತಿ ಉಳಿದಿದ್ದರೆ ನೂಡಲ್ಸ್ ಮಾಡಿ!

Webdunia
ಶನಿವಾರ, 13 ಮೇ 2017 (08:45 IST)
ಬೆಂಗಳೂರು: ಚಪಾತಿ ರಾತ್ರಿ ಯಾರೂ ತಿನ್ನದೇ ಉಳಿದಿದೆಯೆಂದರೆ ಮರುದಿನಕ್ಕೆ ತಿನ್ನಲು ಯಾರಿಗೂ ಇಷ್ಟವಾಗುವುದಿಲ್ಲ. ಆಗ ಅದನ್ನು ಸುಮ್ಮನೇ ವೇಸ್ಟ್ ಮಾಡಬೇಡಿ. ಅದರಿಂದ ನೂಡಲ್ಸ್ ಮಾಡಬಹುದು. ಹೇಗೆಂದು ನೋಡಿಕೊಳ್ಳಿ.

 
ಬೇಕಾಗುವ ಸಾಮಗ್ರಿಗಳು
ಚಪಾತಿ, ಈರುಳ್ಳಿ, ಹಸಿಮೆಣಸಿನ ಕಾಯಿ, ಬಟಾಣಿ, ಕ್ಯಾರೆಟ್, ಸೋಯಾ ಸಾಸ್, ಕಾಳು ಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು,  ಎಣ್ಣೆ, ಉಪ್ಪು.

ಮಾಡುವ ವಿಧಾನ
ಚಪಾತಿಯನ್ನು ಒಂದರ ಮೇಲೊಂದಿಟ್ಟುಕೊಂಡು ಹರಿತವಾದ ಚಾಕು ಅಥವಾ ಕತ್ತರಿ ಬಳಸಿಕೊಂಡು ತೆಳುವಾದ ಕೋಲಿನ ಆಕಾರಕ್ಕೆ ಕತ್ತರಿಸಿ. ಒಂದು ಬಾಣಲೆಗೆ ಎಣ್ಣೆ ಹಾಕಿಕೊಂಡು, ಈರುಳ್ಳಿ, ಬೆಳ್ಳುಳ್ಳಿ, ಕ್ಯಾರೆಟ್, ಬೇಯಿಸಿದ ಬಟಾಣಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದು ಬೆಂದ ನಂತರ ಸ್ವಲ್ಪ ಹಸಿಮೆಣಸಿನಕಾಯಿ ಹಾಕಿ ಇನ್ನಷ್ಟು ಫ್ರೈ ಮಾಡಿ.

ನಂತರ ಈ  ಮಿಶ್ರಣಕ್ಕೆ ಸಾಯಾ ಸಾಸ್, ಕಾಳುಮೆಣಸಿನ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಕತ್ತರಿಸಿಟ್ಟುಕೊಂಡ ಚಪಾತಿ ತುಂಡುಗಳನ್ನು ಹಾಕಿ ತಿರುವಿ. ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ಚಪಾತಿ ನೂಡಲ್ಸ್ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments