ಕೊಚ್ಚಿ: ಹೇಳಿ ಕೇಳಿ ಈಗ ಹಲಸಿನಕಾಯಿ ಸೀಸನ್. ಇದು ಹಣ್ಣುಗಳ ಪೈಕಿ ಗಾತ್ರದಲ್ಲಿ ದೊಡ್ಡದು ಎನ್ನುವುದು ನಿಜ. ಆದರೆ ಒಂದು ಹಲಸಿನಕಾಯಿ ಹೆಚ್ಚು ಎಂದರೆ ಎಷ್ಟು ತೂಗಬಹುದು? 10 ರಿಂದ 15 ಕೆ.ಜಿ. ಅಂದುಕೊಳ್ಳೋಣ.
ಆದರೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ತೋಟದಲ್ಲಿ ಸಿಕ್ಕ ಹಲಸಿನಕಾಯಿ ಬರೋಬ್ಬರಿ 50 ಕೆ.ಜಿ. ತೂಗುತ್ತಿದೆ! ಇದುವರೆಗೆ ವಿಶ್ವದಲ್ಲಿ ಅತೀ ಭಾರವಾದ ಹಲಸಿನಕಾಯಿ ಎಂದರೆ 42.7 ಕೆ.ಜಿ. ತೂಕದ್ದಾಗಿತ್ತು.
ಆದರೆ ಜಾನ್ ಕುಟ್ಟಿ ಎಂಬವರ ತೋಟದಲ್ಲಿ ಸಿಕ್ಕ ಹಲಸಿನಕಾಯಿ ಅರ್ಧಶತಕ ತೂಕದ್ದಾಗಿದೆ. ಇದರ ಉದ್ದ ಸುಮಾರು 97 ಸೆ.ಮೀ.ನಷ್ಟು. ಹೀಗಾಗಿ ಈಗ ಜಾನ್ ಕುಟ್ಟಿ ಗಿನ್ನಿಸ್ ದಾಖಲೆಗಾಗಿ ಪತ್ರ ಬರೆದಿದ್ದಾರಂತೆ.