Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಖದ ಅಂದ ಹೆಚ್ಚಿಸಲು ಏನೇನು ಮಾಡಬೇಕು?

ಮುಖದ ಅಂದ ಹೆಚ್ಚಿಸಲು ಏನೇನು ಮಾಡಬೇಕು?
Bangalore , ಗುರುವಾರ, 11 ಮೇ 2017 (09:11 IST)
ಬೆಂಗಳೂರು: ಮುಖ ನಮ್ಮ ವ್ಯಕ್ತಿತ್ವದ ಗುರುತು ಇದ್ದಂತೆ. ನಮ್ಮ ಮುಖ ಹೇಗಿರುತ್ತದೋ ಹಾಗೇ ನಮ್ಮ ವ್ಯಕ್ತಿತ್ವವೂ ಇರುತ್ತದೆ ಅಂತಾರೆ. ಅಂದದ ಮುಖದಲ್ಲೇ ಇಂಪ್ರೆಸ್ ಮಾಡಬೇಕಾದರೆ ಅದನ್ನು ಸರಳ ಉಪಾಯಗಳಿಂದ ಸುಂದರವಾಗಿರಿಸಿ.

 
·         ಒಳ್ಳೆ ಕಾಂತಿಗೆ ಟೊಮೆಟೋ ರಸವನ್ನು ಹಚ್ಚಿ ನಂತರ ಮುಖ ತೊಳೆದುಕೊಳ್ಳಿ.
·         ಗುಲಾಬಿ ಹೂವಿನ ದಳ ಮತ್ತು ಶ್ರೀಗಂಧವನ್ನು ಜತೆಗೆ ಅರೆದುಕೊಂಡು ಮುಖಕ್ಕೆ ಹಚ್ಚಿಕೊಂಡು ನಂತರ ತೊಳೆದುಕೊಳ್ಳಿ.
·         ಮುಖ ಎಣ್ಣೆ ಸೋಕಿದಂತೆ ಜಿಡ್ಡು ಇದ್ದರೆ ತಣ್ಣೀರಿನಲ್ಲಿ ಆಗಾಗ್ಗೆ ಮುಖ ತೊಳೆದುಕೊಳ್ಳಿ.
·         ಎಳೆನೀರು ಕುಡಿಯಿರಿ ಮತ್ತು ತೆಂಗಿನ ಕಾಯಿಯ ನೀರಿನಿಂದ ಮುಖ ತೊಳೆದುಕೊಂಡರೆ ಉತ್ತಮ.
·         ಚರ್ಮ ಬಿರುಕಾಗಿದ್ದರೆ ಪ್ರತಿ ನಿತ್ಯ ಆ ಭಾಗಗಳಿಗೆ ಸಾಸಿವೆ ಎಣ್ಣೆ ಹಚ್ಚಿ.
·         ಮಂಜುಗಡ್ಡೆ ಲೇಪನ ಮುಖಕ್ಕೆ ಒಳ್ಳೆ ಲೇಪನ.
·         ರಾತ್ರಿ ಮಲಗುವ ಮುನ್ನ ಹಾಲಿನ ಕೆನೆ ಸವರಿ ಮಲಗಿಕೊಂಡರೆ ಚರ್ಮ ಮೃದುವಾಗುವುದು.
·         ಎಷ್ಟೇ ಮೇಕಪ್ ಮಾಡಿಕೊಂಡರೂ ರಾತ್ರಿ ಮಲಗುವ ಮುನ್ನ ಮಂಜುಗಡ್ಡೆ ಹಾಕಿ ಮುಖ ತೊಳೆದುಕೊಂಡು ಮಲಗಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬಾಳೆಹಣ್ಣಿನ ಸಿಪ್ಪೆಯ ಮತ್ತಷ್ಟು ಉಪಯೋಗಗಳು