ಬೆಂಗಳೂರು: ಮಾವಿನ ಕಾಯಿ ಇಷ್ಟಪಡದವರು ಯಾರು? ಎಲ್ಲರೂ ಇಷ್ಟಪಡುವ ಮಾವಿನ ಕಾಯಿ ಜಾಮ್ ಮನೆಯಲ್ಲೇ ತಯಾರಿಸಬಹುದು. ಇದು ತುಂಬಾ ಸುಲಭ ಮತ್ತು ಜಾಸ್ತಿ ಸಾಮಗ್ರಿಗಳೂ ಬೇಕಾಗಿಲ್ಲ.
ಬೇಕಾಗುವ ಸಾಮಗ್ರಿಗಳು
ಮಾವಿನ ಕಾಯಿ
ಸಕ್ಕರೆ
ಏಲಕ್ಕಿ ಪುಡಿ
ಮಾಡುವ ವಿಧಾನ
ಹುಳಿಯಿಲ್ಲದ ಮಾವಿನ ಕಾಯಿ ಬಳಸುವುದು ಉತ್ತಮ. ತೋತಾ ಪುರಿ ಮಾವಿನ ಕಾಯಿಯಂತಹ ಹುಳಿಯಿಲ್ಲದ ಮಾವಿನ ಕಾಯಿಯನ್ನು ಸಿಪ್ಪೆ ತೆಗೆದು ತಿರುಳು ತುರಿದಿಟ್ಟುಕೊಳ್ಳಿ. ಇದನ್ನು ಬಾಣಲೆಯಲ್ಲಿ ಸಕ್ಕರೆ ಹಾಕಿ ಕಲಸುತ್ತಾ ಇರಿ. ನೂಲು ಪಾಕ ಬರುವವರೆಗೂ ಕೈಯಾಡಿಸುತ್ತಾ ಇರಿ. ನೂಲು ಪಾಕ ಬಂದ ಮೇಲೆ ಸ್ವಲ್ಪ ಏಲಕ್ಕಿ ಪುಡಿ ಹಾಕಿ ಕೊಂಡರೆ ಮಾವಿನ ಕಾಯಿ ಜ್ಯಾಮ್ ಸಿದ್ಧ. ಇದನ್ನು ಬೆಚ್ಚಗಿನ ಸ್ಥಳದಲ್ಲಿ ಶೇಖರಿಸಿಟ್ಟರೆ, ಆರು ತಿಂಗಳು ಕಾಲವೂ ಕೆಡುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ