ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಮೂಲಂಗಿ 1
* ಈರುಳ್ಳಿ 1
* 4 ಎಸಳು ಬೆಳ್ಳುಳ್ಳಿ
* 2 ಟೀ ಚಮಚ ಕಡಲೆಬೇಳೆ
* 1 ಟೀ ಚಮಚ ಉದ್ದಿನಬೇಳೆ
* ಶುಂಠಿ
* ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು
* ಹಸಿಮೆಣಸಿನಕಾಯಿ 3
* ಹುಣಸೆಹಣ್ಣು ಮತ್ತು ಉಪ್ಪು
* ಚಿಟಿಕೆ ಅರಿಶಿನ ಮತ್ತು ಇಂಗು
* ಎಣ್ಣೆ ಮತ್ತು ಸಾಸಿವೆ
ತಯಾರಿಸುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿ ಕಡಲೆಬೇಳೆ ಮತ್ತು ಉದ್ದಿನಬೇಳೆಯನ್ನು ಹುರಿದಿಟ್ಟುಕೊಳ್ಳಬೇಕು. ನಂತರ ಸ್ವಲ್ಪ ಎಣ್ಣೆಯಲ್ಲಿ ಬೆಳ್ಳುಳ್ಳಿ, ಹಸಿಮೆಣಸನ್ನು ಬಾಡಿಸಿಕೊಳ್ಳಬೇಕು. ನಂತರ ಹೆಚ್ಚಿದ ಈರುಳ್ಳಿಯನ್ನು ಬಾಡಿಸಿಕೊಳ್ಳಬೇಕು. ನಂತರ ತುರಿದ ಮೂಲಂಗಿಯನ್ನು ಸೇರಿಸಿ ಅದರ ಹಸಿ ವಾಸನೆಯು ಹೋಗುವ ತನಕ ಬಾಡಿಸಿ ನಂತರ ಚಿಟ್ಕೆ ಅರಿಶಿನವನ್ನು ಬೆರೆಸಿ ಸ್ವಲ್ಪ ಬಾಡಿಸಬೇಕು. ಕೊನೆಯಲ್ಲಿ ಎರಡು ತುಣುಕು ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹುಣಸೆರಸವನ್ನು ಸೇರಿಸಿ ಮಿಶ್ರಣವು ತಣ್ಣಗಾಗಲು ಬಿಡಬೇಕು. ನಂತರ ಈಗಾಗಲೇ ಹುರಿದಿಟ್ಟ ಕಡಲೆಬೇಳೆ ಮತ್ತು ಉದ್ದಿನಬೇಳೆಯನ್ನು ಮಿಕ್ಸಿಯಲ್ಲಿ ಪುಡಿಮಾಡಿ ನಂತರ ತಣ್ಣಗಾದ ಮಿಶ್ರಣವನ್ನು ಅದಕ್ಕೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಅದನ್ನು ಮಿಕ್ಸಿಯಲ್ಲಿ ತರತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಸಿದ್ಧವಾದ ಚಟ್ನಿಗೆ ಇಂಗು, ಸಾಸಿವೆ, ಕರಿಬೇವಿನ ಒಗ್ಗರಣೆಯನ್ನು ಕೊಟ್ಟರೆ ರುಚಿಯಾದ ಮೂಲಂಗಿ ಚಟ್ನಿ ಸವಿಯಲು ಸಿದ್ಧ. (ಬೇಕಾದರೆ ಕೊಬ್ಬರಿ ತುರಿಯನ್ನು ಸೇರಿಸಿಕೊಳ್ಳಬಹುದು)