ಮೊದಲು ಮರಬದನೆಯನ್ನು ಕಟ್ ಮಾಡಿ ಮೂರರಿಂದ ನಾಲ್ಕು ಬಾರಿ ಹಿಚುಕಿ ಬೀಡ ಹೋಗುವವರೆಗೆ ತೊಳೆದು ಬೇಯಲು ಇಡಬೇಕು. ನಂತರ ಬಾಣಲೆಯಲ್ಲಿ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಕರಿಬೇವು, ಧನಿಯಾ ಹಾಕಿ ಕೆಂಪಗೆ ಹುರಿದು ಕಾಯಿತೊರೆಯೊಂದಿಗೆ ರುಬ್ಬಿಕೊಳ್ಳಬೇಕು. ನಂತರ ಮರಬದನೆಯು ಅರ್ಧ ಬೆಂದ ಮೇಲೆ ಟೊಮೊಟೊ, ಆಲೂಗಡ್ಡೆಯನ್ನು ಕಟ್ ಮಾಡಿ ಹಾಕಿ ಅದು ಕುದಿ ಬಂದ ಮೇಲೆ ಅದಕ್ಕೆ ಅರಿಶಿನ, ಉಪ್ಪು, ಬೆಲ್ಲವನ್ನು ಹಾಕಿ ಅರೆದ ಮಿಶ್ರಣವನ್ನು ಹಾಕಿ ಕುದಿಸಬೇಕು. ಅದು ಚೆನ್ನಾಗಿ ಕುದಿದ ನಂತರ ಮರಬದನೆ ಸಾಂಬಾರ್ ಸವಿಯಲು ಸಿದ್ಧ,