ಬೆಂಗಳೂರು: ಓಣಂ ಹಬ್ಬದ ವಿಶೇಷ ತಿಂಡಿಗಳಲ್ಲಿ ಸಕ್ಕರೆ ಬೆರಟಿ ಕೂಡಾ ಒಂದು. ಕೇರಳ ಬಾಳೆ ಕಾಯಿ ಉಪಯೋಗಿಸಿ ಮಾಡುವ ಈ ಆರೋಗ್ಯಕರ ಸಿಹಿ ತಿನಿಸು ಮಾಡುವುದು ಹೇಗೆಂದು ನೋಡೋಣ.
ಬೇಕಾಗುವ ಸಾಮಗ್ರಿಗಳು
ಕೇರಳ ಬಾಳೆಕಾಯಿ
ಬೆಲ್ಲ
ಕಾಳು ಮೆಣಸಿನ ಪುಡಿ
ಏಲಕ್ಕಿ ಪುಡಿ
ಕರಿಯಲು ಎಣ್ಣೆ
ಮಾಡುವ ವಿಧಾನ
ಕೇರಳ ಬಾಳೆ ಕಾಯಿ ಸಿಪ್ಪೆ ತೆಗೆದು ಬಿಲ್ಲೆಗಳಾಗಿ ಹೆಚ್ಚಿಕೊಳ್ಳಿ. ಸ್ವಲ್ಪ ದಪ್ಪಕೆ ಹೆಚ್ಚಿಕೊಳ್ಳುವುದು ಉತ್ತಮ. ಇದನ್ನು ಕಾದ ಎಣ್ಣೆಯಲ್ಲಿ ಹುರಿದು ತೆಗೆಯಿರಿ. ಒಂದು ಪಾತ್ರೆಯಲ್ಲಿ ಬೆಲ್ಲದ ಪಾಕ ಮಾಡಲು ಇಡಿ. ಇದು ನೂಲು ಪಾಕವಾಗಬೇಕು. ಇದಕ್ಕೆ ಏಲಕ್ಕಿ, ಕಾಳುಮೆಣಸಿನ ಪುಡಿ ಹಾಗೂ ಹುರಿದ ಬಾಳೆಕಾಯಿಯನ್ನು ಸೇರಿಸಿ ತಿರುವಿಕೊಳ್ಳಿ. ನಂತರ ಬೆಲ್ಲದ ಪಾಕದ ಉರಿ ನಿಲ್ಲಿಸಿ ಸಂಪೂರ್ಣ ತಣ್ಣಗಾಗುವರೆಗೆ ಕಾಯಿರಿ. ಈಗ ಸಕ್ಕರೆ ಬೆರಟಿ ತಿನ್ನಲು ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ