Webdunia - Bharat's app for daily news and videos

Install App

ರುಚಿಯಾದ ಸ್ಯಾಂಡ್‌ವಿಚ್‌ಗಳನ್ನು ಮಾಡಿ ಸವಿಯಿರಿ...

Webdunia
ಸೋಮವಾರ, 25 ಮಾರ್ಚ್ 2019 (18:31 IST)
1. ಪಾಲಕ್ ಸ್ವೀಟ್ ಕಾರ್ನ್ ಸ್ಯಾಂಡ್‌ವಿಚ್‌
ಬೇಕಾಗುವ ಸಾಮಗ್ರಿಗಳು:
ಪಾಲಾಕ್ - 1 ಕಪ್
ಸ್ವೀಟ್ ಕಾರ್ನ್ - 1/2 ಕಪ್
ಬೆಣ್ಣೆ - 2 ಟೇ ಚಮಚ
ಈರುಳ್ಳಿ - 2 ಟೇ ಚಮಚ
ಮಿಕ್ಸಡ್ ಹರ್ಬ್ಸ್ - 1/2 ಚಮಚ
ಚಿಲ್ಲಿ ಫ್ಲೇಕ್ಸ್ - 1/2 ಚಮಚ
ಕಾಳುಮೆಣಸಿನ ಪುಡಿ - 1/2 ಚಮಚ
ಉಪ್ಪು - 1/4 ಟೇ ಚಮಚ
ಬ್ರೆಡ್ ಸ್ಲೈಸ್ - 8-10
ಹಸಿರು ಚಟ್ನಿ - ಸ್ವಲ್ಪ
ಚೀಸ್ ಸ್ಲೈಸ್ - 4-5
 
ಮಾಡುವ ವಿಧಾನ:
ಒಂದು ಪ್ಯಾನ್‌ನಲ್ಲಿ 1 ಚಮಚ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಈರುಳ್ಳಿ ಬೆಂದ ನಂತರ ಅದಕ್ಕೆ ಹೆಚಿದ ಪಾಲಾಕ್ ಸೊಪ್ಪನ್ನು ಹಾಕಿ ಹುರಿಯಿರಿ. ಪಾಲಾಕ್ ಸೊಪ್ಪು ಬೆಂದ ನಂತರ ಸ್ಟೀಟ್ ಕಾರ್ನ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಮಿಕ್ಸಡ್ ಹರ್ಬ್ಸ್, ಚಿಲ್ಲಿ ಫ್ಲೇಕ್ಸ್, ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿ. ಎರಡು ಬ್ರೆಡ್ ಸ್ಲೈಸ್‌ಗಳನ್ನು ತೆಗೆದುಕೊಂಡು 1/2 ಚಮಚ ಹಸಿರು ಚಟ್ನಿಯನ್ನು ಒಂದು ಭಾಗಕ್ಕೆ ಸವರಿ ಒಂದರ ಮೇಲೆ ನೀವು ಈಗಾಗಲೇ ರೆಡಿ ಮಾಡಿಟ್ಟುಕೊಂಡಿರುವ ಪಾಲಾಕ್ ಮಿಶ್ರಣವನ್ನು ಹಾಕಿ. ಅದರ ಮೇಲೆ  ಒಂದು ಚೀಸ್ ಸ್ಲೈಸ್ ಅನ್ನು ಇಟ್ಟು ಇನ್ನೊಂದು ಬ್ರೆಡ್ ಅನ್ನು ಮುಚ್ಚಿರಿ. ಈಗ ಸ್ಯಾಂಡ್‌ವಿಚ್‌ನ ಎರಡೂ ಹೊರಮೈಗೆ 1/2 ಚಮಚ ಬೆಣ್ಣೆಯನ್ನು ಸವರಿ ಕಾದ ತವಾದ ಮೇಲಿಟ್ಟು ಕಡಿಮೆ ಉರಿಯಲ್ಲಿ ಎರಡೂ ಮೇಲ್ಮೈ ಹೊಂಬಣ್ಣಕ್ಕೆ ಬರುವಂತೆ ಹುರಿದರೆ ರುಚಿಯಾದ ಪಾಲಾಕ್ ಕಾರ್ನ್ ಸ್ಯಾಂಡ್‌ವಿಚ್ ಸಿದ್ಧವಾಗುತ್ತದೆ.
 
2.ಮೊಸರಿನ ಸ್ಯಾಂಡ್‌ವಿಚ್:
ಬೇಕಾಗುವ ಸಾಮಗ್ರಿಗಳು:
ಮೊಸರು - 2 ಕಪ್
ಮಯೋನೀಸ್ - 1/4 ಕಪ್
ತುರಿದ ಕ್ಯಾರೆಟ್ - 2 ಟೇ ಚಮಚ
ಹೆಚ್ಚಿದ ಕ್ಯಾಬೆಜ್ - 2 ಟೇ ಚಮಚ
ಹೆಚ್ಚಿದ ಕ್ಯಾಪ್ಸಿಕಂ - 2 ಟೇ ಚಮಚ
ಬೇಯಿಸಿದ ಸ್ವೀಟ್ ಕಾರ್ನ್ - 2 ಟೇ ಚಮಚ
ಕಾಳುಮೆಣಸಿನ ಪುಡಿ - 1/2 ಟೇ ಚಮಚ
ಉಪ್ಪು - 1/4 ಟೇ ಚಮಚ
ಬ್ರೆಡ್ ಸ್ಲೈಸ್ - 6-8
 
ಮಾಡುವ ವಿಧಾನ:
2 ಕಪ್ ದಪ್ಪ ಮೊಸರನ್ನು ತೆಗೆದುಕೊಂಡು ಅದನ್ನು 2 ಗಂಟೆಗಳವರೆಗೆ ಬಿಳಿಯ ಹತ್ತಿಯ ಬಟ್ಟೆಯಲ್ಲಿ ಹಾಕಿ ಕಟ್ಟಿ ಸೋಸಿ ನೀರನ್ನು ಬೇರ್ಪಡಿಸಿಕೊಳ್ಳಿ. ನಂತರ ಅದಕ್ಕೆ 1/4 ಕಪ್ ಮಯೋನೀಸ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ತುರಿದ ಕ್ಯಾರೆಟ್, ಚಿಕ್ಕದಾಗಿ ಹೆಚ್ಚಿದ ಕ್ಯಾಬೆಜ್, ಕ್ಯಾಪ್ಸಿಕಂ, ಬೇಯಿಸಿದ ಸ್ವೀಟ್ ಕಾರ್ನ್, ಕಾಳುಮೆಣಸಿನ ಪುಡಿ, ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಎರಡು ಬ್ರೆಡ್ ಸ್ಲೈಸ್‌ಗಳನ್ನು ತೆಗೆದುಕೊಂಡು ಅದರ ಅಂಚುಗಳನ್ನು ಕತ್ತರಿಸಿ ಬೇರ್ಪಡಿಸಿಕೊಳ್ಳಿ. ನಂತರ ಅದರ ಮೇಲೆ ಮೊಸರಿನ ಸ್ಟಫಿಂಗ್ ಅನ್ನು ಹಾಕಿ ಇನ್ನೊಂದು ಬ್ರೆಡ್ ಅನ್ನು ಮುಚ್ಚಿ ಪ್ರೆಸ್ ಮಾಡಿದರೆ ರುಚಿಯಾದ ಮೊಸರಿನ ಸ್ಯಾಂಡ್‌ವಿಚ್ ಸಿದ್ದವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments