ಬೆಂಗಳೂರು: ಹಾಗಲಕಾಯಿ ಎಂದರೆ ಎಲ್ಲರ ಮುಖ ಕಹಿಯಾಗುತ್ತದೆ. ಈ ಹಾಗಲಕಾಯಿ ತಿನ್ನಬೇಕೆಂದೆನಿಸಿದರೂ, ಅದರ ಕಹಿ ರುಚಿ ನೋಡಿ ಬೇಡ ಎನ್ನುವವರಿಗೆ ಸಿಹಿಯಾದ ಪಲ್ಯ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ನೋಡಿಕೊಳ್ಳಿ.
ಹಾಗಲಕಾಯಿಯನ್ನು ಹೆಚ್ಚಿ ಉಪ್ಪು ಬೆರೆಸಿ ಕೆಲ ಕಾಲ ಹಾಗೇ ಇಡಿ. ನಂತರ ಇದನ್ನು ಚೆನ್ನಾಗಿ ಹಿಂಡಿ ಕಹಿ ತೆಗೆದುಕೊಳ್ಳಿ. ನಂತರ ಬಾಣಲೆಗೆ ಒಗ್ಗರಣೆ ಹಾಕಿಕೊಂಡು ಹಾಗಲಕಾಯಿ, ಅರಸಿನ ಪುಡಿ, ಹಸಿಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಇದಕ್ಕೆ ಖಾರದಪುಡಿ, ಬೆಲ್ಲ ಹಾಕಿ ಚೆನ್ನಾಗಿ ಬೇಯಿಸಿ. ಬೆಲ್ಲ ಸ್ವಲ್ಪ ಜಾಸ್ತಿಯೇ ಹಾಕಿ. ಹೋಳುಗಳು ಸ್ವಲ್ಪ ಬೆಂದ ಮೇಲೆ ಹುಣಸೆ ರಸ, ಉಪ್ಪು ಹಾಕಿ. ಚೆನ್ನಾಗಿ ಬೆಂದಾಗ ಇದಕ್ಕೆ ಕಾಯಿ ತುರಿ ಹಾಕಿ ತಿರುವಿ. ನೀರು ಪೂರ್ತಿ ಆರಿಸುವುದು ಬೇಡ. ಸ್ವಲ್ಪ ಗ್ರೇವಿಯ ಹಾಗಿದ್ದರೆ ರುಚಿ ಹೆಚ್ಚು. ಅಷ್ಟೇ.. ಹಾಗಲಕಾಯಿ ಸಿಹಿ ಪಲ್ಯ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ