ವಿಧಾನ : ಜೀರಿಗೆ, ಓಮು ಮತ್ತು ಇ೦ಗು ಇವೆಲ್ಲವನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ಕಡಲೆಹಿಟ್ಟು, ಅಕ್ಕಿ ಹಿಟ್ಟು, ತರಿ ತರಿಯಾಗಿ ಪುಡಿ ಮಾಡಿಕೊ೦ಡ ಜೀರಿಗೆ, ಓಮು, ಇ೦ಗು, ಅಡುಗೆ ಸೋಡ, ಉಪ್ಪು ಎಲ್ಲವನ್ನು ಸೇರಿಸಿ ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ ಗ೦ಟಾಗದ೦ತೆ ಚೆನ್ನಾಗಿ ಕಲೆಸಿಕೊಳ್ಳಿ. 10 ನಿಮಿಷ ಹಿಟ್ಟನ್ನು ಹಾಗೆಯೇ ಬಿಡಿ. ಇದರಿ೦ದ ಚೆನ್ನಾಗಿ ಹಿಟ್ಟು ಹದಕ್ಕೆ ಬರುತ್ತದೆ.
ನಂತರ ಎಣ್ಣೆಯನ್ನು ಬಾಣಲೆಗೆ ಹಾಕಿ ಚೆನ್ನಾಗಿ ಕಾಯಿಸಿ. ಎಣ್ಣೆ ಕಾದ ಮೇಲೆ ಮೆಣಸನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಚೆನ್ನಾಗಿ ಕರಿಯಿರಿ. ಕೆಂಪಗಾಗುತ್ತಿದ್ದಂತೆ ಅದನ್ನು ಮೇಲೆಕ್ಕೆ ತೆಗೆಯಿರಿ. ನಂತರ ಬಜ್ಜಿಯನ್ನು ಸರಿಯಾಗಿ ಮಧ್ಯ ಕತ್ತರಿಸಿ ಅಲ್ಲಿ ಕತ್ತರಿಸಿದ ಕ್ಯಾರೆಟ್, ಈರುಳ್ಳಿ ಕೊತ್ತೊಂಬರಿ ಸೊಪ್ಪು ಸ್ವಲ್ಪ ಚಾಟ್ ಮಸಾಲೆಯನ್ನು ಸೇರಿಸಿ ಅದರ ಮೇಲೆ ಲಿಂಬೆ ರಸವನ್ನು ಹಾಕಿದರೆ ರುಚಿಕರವಾದ ಮೆಣಿಸಿನ ಕಾಯಿ ಬಜ್ಜಿ ಸಿದ್ಧ. ಬರಿ ಬಜ್ಜಿ ಮಾತ್ರ ಆದಲ್ಲಿ ಚಟ್ನಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.