ಬೆಂಡೆಕಾಯಿಯನ್ನು ಸಾಂಬಾರ್ ಗೆ ಬೇಕಾದ ಹಾಗೆ ಕತ್ತರಿಸಿಕೊಳ್ಳಿ. ಇದನ್ನು ಹುಣಸೆ ಹುಳಿ ರಸ, ಅರಸಿನ ಪುಡಿ, ಉಪ್ಪು, ಬೆಲ್ಲ ಹಾಕಿ ಬೇಯಿಸಿಕೊಳ್ಳಿ. ಬೆಲ್ಲ ಸ್ವಲ್ಪ ಜಾಸ್ತಿಯೇ ಇರಲಿ. ಬಾಣಲೆಯಲ್ಲಿ ಉದ್ದಿನ ಬೇಳೆ, ಕೆಂಪು ಮೆಣಸು, ಇಂಗು ಹಾಕಿಕೊಂಡು ಎಣ್ಣೆ ಹಾಕಿ ಹುರಿದುಕೊಳ್ಳಿ. ಇದನ್ನು ಕಾಯಿ ತುರಿಯೊಂದಿಗೆ ಹಾಕಿ ನುಣ್ಣಗೆ ರುಬ್ಬಿ. ಈ ಮಸಾಲೆಯನ್ನು ಬೆಂದ ಬೆಂಡೆಕಾಯಿ ಹೋಳಿನ ಜತೆಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದು ಸಾಂಬಾರ್ ನಷ್ಟು ತೆಳ್ಳಗಾಗುವುದು ಬೇಡ. ನಂತರ ಒಗ್ಗರಣೆ ಹಾಕಿದರೆ ಬೆಂಡೆಕಾಯಿ ಕಾಯಿರಸ ರೆಡಿ. ಇದು ಅನ್ನ, ದೋಸೆಯ ಜತೆಗೆ ತಿನ್ನಲು ರುಚಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ