ಸಾಮಾನ್ಯವಾಗಿ ಚಕ್ಕುಲಿಗೆ ಉದ್ದನ್ನು ಹಾಕಿ ಮಾಡುವುದು ವಾಡಿಕೆ. ಆದರೆ ಉದ್ದನ್ನು ಹಾಕದೇ ಬೆಣ್ಣೆ ಚಕ್ಕುಲಿಯನ್ನು ಹೇಗೆ ಮಾಡುವುದೆಂದರೆ ಮೊದಲು ಒಂದು ಪಾತ್ರೆಯಲ್ಲಿ 1 ಕಪ್ ಅಕ್ಕಿ ಹಿಟ್ಟು, 1/2 ಕಪ್ ಮೈದಾ, ಚಿಟಕೆ ಇಂಗು, ಅರಿಶಿನ 1/2 ಚಮಚ, ಖಾರದ ಪುಡಿ 1/2 ಚಮಚ, ಉಪ್ಪು, 1 ಸೌಟು ಬೆಣ್ಣೆ, 1/2 ಕಪ್ ಮೊಸರನ್ನು ಹಾಕಿ ಚೆನ್ನಾಗಿ ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ನಂತರ ಚಕ್ಕುಲಿ ಅಂಡೆಯನ್ನು ಬಳಸಿ ಚಕ್ಕುಲಿಯನ್ನು ಒತ್ತಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕೆಂಪಣ್ಣ ಬರುವವರೆಗೆ ಕಾಯಿಸಿ ತೆಗೆಯಬೇಕು. ಹೀಗೆ ಮಾಡಿದರೆ ರುಚಿಯಾದ ಗರಿ ಗರಿಯಾದ ಇನ್‌ಸ್ಟೆಂಟ್ ಬೆಣ್ಣೆ ಚಕ್ಕುಲಿ ತಿನ್ನಲು ಸಿದ್ಧ.