ಮಟ್ಟುಗುಳ್ಳ, ಗುಳ್ಳ ಬದನೆ, ವಾದಿರಾಜ ಗುಳ್ಳ. ಇದು ಉಡುಪಿಯ `ಮಟ್ಟು’ ಗ್ರಾಮದಲ್ಲಿ ಬೆಳೆಯುವ, ವಿಶಿಷ್ಟ ರುಚಿಯಿರುವ ಬದನೆಯ ಒಂದು ಪ್ರಭೇದ.
ತುಳುನಾಡಿನಲ್ಲಿ ಮಾಮೂಲಿ ಬದನೆಗಿಂತ ಜನ ಹೆಚ್ಚು ಇಷ್ಟಪಡುವ ಬದನೆ ಇದು. ಹೀಗಾಗಿ ತುಳುವರು ಇದನ್ನು ಗುಳ್ಳಬದನೆ ಎಂದೇ ಕರೆಯುತ್ತಾರೆ. ಗುಳ್ಳ ಬದನೆಯ ಪೋಡಿ ಮಳೆಗಾಲದ ಚಳಿಗೆ ತುಂಬಾ ರುಚಿ ನೀಡುತ್ತೆ. ಹಾಗಿದ್ರೆ ಮಟ್ಟು ಗುಳ್ಳ ಪೋಡಿ ಮಾಡೋದು ಹೇಗೆ ಅನ್ನೋದು ಇಲ್ಲಿದೆ ನೋಡಿ…
ಮಟ್ಟುಗುಳ್ಳ ಪೋಡಿ
ಬೇಕಾಗುವ ಪದಾರ್ಥಗಳು:
ಮಟ್ಟುಗುಳ್ಳ ಬದನೆ – 2
ಚಿಲ್ಲಿ ಪೌಡರ್ – 3 ಚಮಚ
ಅರಿಶಿನ – ½ ಚಮಚ
ಹಿಂಗು - ½ ಚಮಚ
ಉಪ್ಪು – 1 ½ ಚಮಚ
ಅಕ್ಕಿ ಹಿಟ್ಟು - 2 ಚಮಚ
ರವೆ – ಸ್ವಲ್ಪ
ಮಾಡುವ ವಿಧಾನ: ಮಟ್ಟುಗುಳ್ಳ ಬದನೆಯನ್ನು ಗುಂಡಾಗಿ ಕಟ್ ಮಾಡಿಕೊಳ್ಳಬೇಕು. ಪಾತ್ರೆಗೆ ಕಟ್ ಮಾಡಿಕೊಂಡ ಬದನೆ, ಚಿಲ್ಲಿ ಪೌಡರ್, ಅರಿಶಿನ, ಹಿಂಗು, ಉಪ್ಪು ಹಾಕಿ ಮಿಕ್ಸ್ ಮಾಡಿ 5 ನಿಮಿಷ ನೆನೆಯಲು ಬಿಡಬೇಕು. ಅಕ್ಕಿ ಹಿಟ್ಟು ಮತ್ತು ರವೆಯನ್ನು ಮಿಕ್ಸ್ ಮಾಡಿ ಮತ್ತೊಂದು ಪ್ಲೇಟ್ ನಲ್ಲಿಟ್ಟುಕೊಳ್ಳಬೇಕು. ನಂತರ ತವಾ ಮೇಲೆ ಎಣ್ಣೆ ಹಾಕಿ ಕಾದ ಬಳಿಕ ಕಲಸಿಟ್ಟುಕೊಂಡ ಬದನೆಯನ್ನು ಅಕ್ಕಿಹಿಟ್ಟು ಮತ್ತು ರವೆಯಲ್ಲಿ ಕಲಸಿ ತವಾ ಮೇಲೆ ಇಡಬೇಕು. ಗೋಲ್ಡನ್ ಕಲರ್ ಬರುವವರೆಗೆ ಫ್ರೈ ಮಾಡಬೇಕು. ಮಳೆಯಲ್ಲಿ ಬಿಸಿಬಿಸಿಯಲ್ಲಿ ತಿನ್ನಲು ಮಟ್ಟುಗುಳ್ಳ ಪೋಡಿ ರೆಡಿ. ಇದನ್ನು ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಕರಿದರೆ ರುಚಿ ದುಪ್ಪಟ್ಟು.