ಬೆಂಗಳೂರು : ಏನಾದ್ರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕೆಂದು ಅನಿಸುವವರು ಹೊರಗೆ ಹೋಗಿ ತಿನ್ನುವ ಬದಲು ಮನೆಯಲ್ಲೇ ಸುಲಭವಾಗಿ ರೆಡಿಯಾಗುವ ಆಲೂ ಬ್ರೆಡ್ ರೋಲ್ ಮಾಡಿ ತಿನ್ನಿ. ಅದನ್ನು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿ:
ಆಲೂಗಡ್ಡೆ- 3, ಬಟಾಣಿ- 1 ಕಪ್, ಈರುಳ್ಳಿ- ಅರ್ಧ ಕಪ್, ಬ್ರೆಡ್ ಸ್ಲೈಸ್- 8 ರಿಂದ 10, ಹಸಿಮೆಣಸಿನಕಾಯಿ- 3 ರಿಂದ 4, ಧನಿಯಾ ಪುಡಿ- ಅರ್ಧ ಚಮಚ, ಉಪ್ಪು- ರುಚಿಗೆ ತಕ್ಕಷ್ಟು , ಎಣ್ಣೆ- ಸ್ವಲ್ಪ.
ಮಾಡುವ ವಿಧಾನ:
* ಕುಕ್ಕರ್‍ಗೆ ಆಲೂಗಡ್ಡೆ, ಬಟಾಣಿ ಹಾಕಿ ಬೇಯಲು ಬೇಕಾಗುವಷ್ಟು ನೀರು ಹಾಕಿ ಎರಡು ಅಥವಾ ಮೂರು ವಿಷಲ್ ಬರುವವರೆಗೆ ಬೇಯಿಸಿ.
* ಕುಕ್ಕರ್ ತಣ್ಣಗಾದ ಬಳಿಕ ಆಲೂಗಡ್ಡೆಯನ್ನು ತೆಗೆದು ಸಿಪ್ಪೆ ಸುಲಿದು, ಚೆನ್ನಾಗಿ ಹಿಸುಕಿ. ಇನ್ನೊಂದು ಪಾತ್ರೆಯಲ್ಲಿ ಬಟಾಣಿಯನ್ನು ಹರಡಿ.
* ಸ್ಟೌವ್ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಕಟ್ ಮಾಡಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ.
* ಈರುಳ್ಳಿ ಕೊಂಚ ಕಂದು ಬಣ್ಣಕ್ಕೆ ಬರುತ್ತಿದ್ದಂತೆಯೇ, ಕೊತ್ತಂಬರಿ ಪುಡಿ ಹಾಕಿ ಮತ್ತೆ ಹುರಿಯಿರಿ.
* ನಂತರ ಇದಕ್ಕೆ ಬೇಯಿಸಿದ ಬಟಾಣಿ ಹಾಕಿ ಫ್ರೈ ಮಾಡಿ. ಬಳಿಕ ಆಲೂಗಡ್ಡೆಯನ್ನು ಬೆರೆಸಿ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಲೆಯಿಂದ ಕೆಳಗಿಳಿಸಿ.
* ಬ್ರೆಡ್ ಪೀಸ್‍ಗಳನ್ನು ತಣ್ಣೀರಿನಲ್ಲಿ ಮುಳುಗಿಸಿ ನೀರು ಹೀರಿಕೊಳ್ಳುವಂತೆ ಮಾಡಿ. ಈ ಪೀಸ್ ಗಳನ್ನು ಕೈಯಲ್ಲಿ ಮೆಲ್ಲಗೆ ಒತ್ತಿ ನೀರನ್ನು ತೆಗೆಯಿರಿ.
* ಆಲೂಗಡ್ಡೆ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ.
* ಈ ಉಂಡೆಗಳನ್ನು ಬ್ರೆಡ್‍ಪೀಸ್ ನ ಮಧ್ಯೆ ಇಟ್ಟು ಎರಡೂ ಕಡೆ ಬ್ರೆಡ್ ನಿಂದ ಉಂಡೆ ಆವರಿಸುವಂತೆ ಮಡಚಿಕೊಳ್ಳಿ.
* ಇನ್ನೊಂದು ಬಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ರೆಡಿ ಮಾಡಿಟ್ಟಿದ್ದ ಬ್ರೆಡ್‍ಗಳನ್ನು ಸಣ್ಣ ಉರಿಯಲ್ಲಿ ಕರಿಯಿರಿ.
* ಕಂದು ಬಣ್ಣಕ್ಕೆ ಬರುವವರೆಗೆ ಕರಿದು ತೆಗೆಯಿರಿ
* ಟೊಮೆಟೋ ಸಾಸ್ ಅಥವಾ ಚಟ್ನಿಯೊಂದಿಗೆ ಸವಿಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ