ಹಲ್ವಾ ಎಂದರೆ ಎಲ್ಲರಿಗೂ ಪ್ರೀತಿ ಯಾವುದೇ ಹಬ್ಬ ಹರಿದಿನಗಳಲ್ಲಿ ಇದನ್ನು ವಿಶೇಷವಾಗಿ ತಯಾರಿಸುವುದು ನಮ್ಮಲ್ಲಿ ವಾಡಿಕೆ. ಭಾರತದಲ್ಲಿ ಅಷ್ಟೇ ಅಲ್ಲದೇ ಇದು ದೇಶ ವಿದೇಶಗಳಲ್ಲೂ ಸಹ ಇದು ಮೆಚ್ಚುಗೆಗೆ ಪಾತ್ರವಾಗಿರುವುದು ತನ್ನ ರುಚಿಯಿಂದ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು ಹಾಗಾದ್ರೆ ಹಲ್ವಾ ಹೇಗೆ ತಯಾರಿಸ್ತಾರೆ ಅದರಲ್ಲಿ ಎಷ್ಟು ತರಹದ ಹಲ್ವಾ ಮಾಡಿ ಸವಿಯಬಹುದು ಎನ್ನೋ ಕಾತುರ ನಿಮಗೆ ಇದ್ರೆ ಇದನ್ನು ಓದಿ
ಹಲ್ವಾವನ್ನು ಕುಂಬಳಕಾಯಿ, ಕ್ಯಾರೆಟ್, ಮುಳ್ಳು ಗೆಣಸು ಬೀಟ್‌ರೂಟ್ ಹೀಗೆ ಹಲವಾರು ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಇದನ್ನು ತುಂಬಾ ಕಡಿಮೆ ಅವಧಿಯಲ್ಲಿ ಸುಲಭವಾಗಿ ಈ ಸ್ವಾದ ಭರಿತ ಸಿಹಿಯನ್ನು ತಯಾರಿಸಬಹುದಾಗಿದೆ. ಬನ್ನಿ ಇಂತಹ ರುಚಿಕರವಾದ ಕೆಲವು ಹಲ್ವಾಗಳನ್ನು ತಯಾರಿಸುವುದು ಹೇಗೆಂದು ನೋಡೋಣ.
1. ಕ್ಯಾರೆಟ್ ಹಲ್ವಾ:
ಬೇಕಾಗುವ ಸಾಮಗ್ರಿಗಳು:
ಒಂದು ಕಪ್ ತುರಿದ ಕ್ಯಾರೇಟ್,
ಎರಡು ಕಪ್ ಹಾಲು,
ರುಚಿಗೆ ತಕ್ಕಷ್ಟು ಸಕ್ಕರೆ
ಏಲಕ್ಕಿ ಪುಡಿ,
ತುಪ್ಪ
ಸ್ವಲ್ಪ ಕೇಸರಿ ದಳ (ಬೇಕಿದ್ದರೆ)
ಸ್ವಲ್ಪ ಗೋಡಂಬಿ, ದ್ರಾಕ್ಷಿ
ತಯಾರಿಸುವ ವಿಧಾನ:
ತುರಿದ ಕ್ಯಾರೆಟನ್ನು ಎರಡು ಚಮಚ ತುಪ್ಪದಲ್ಲಿ ಸ್ವಲ್ಪ ಹುರಿದುಕೊಳ್ಳಿ. ನಂತರ ಅದಕ್ಕೆ ಹಾಲು ಹಾಕಿ ಚೆನ್ನಾಗಿ ಬೇಯಿಸಿ. ಬೇಯಿಸುವಾಗ ತಳ ಹಿಡಿಯದಂತೆ ತಿರುವುತ್ತೀರಿ. ಕ್ಯಾರೆಟ್ ತುರಿ ಬೆಂದ ನಂತರ ಅದಕ್ಕೆ ಸಕ್ಕರೆ ಹಾಕಿ ಅದು ಕರಗುತ್ತಿದ್ದಂತೆಯೇ ಚೆನ್ನಾಗಿ ಹೊಂದಿಕೊಳ್ಳುವಂತೆ ಬೆರೆಸಿ. ಕೇಸರಿ ಹಾಕುವುದಾದರೆ ಅದನ್ನು 2 ಚಮಚ ಹಾಲಿನಲ್ಲಿ ಮೊದಲೆ ನೆನೆಸಿಟ್ಟು, ಸಕ್ಕರೆ ಬೆರೆಸಿದ ನಂತರ ಸೇರಿಸಿ ಹಾಗೂ ಸ್ವಲ್ಪ ಏಲಕ್ಕಿ ಪುಡಿಯನ್ನು ಬೆರೆಸಿ. ನಂತರ ಮತ್ತೆರಡು ಚಮಚ ತುಪ್ಪ ಸೇರಿಸಿ. ತುಪ್ಪದಲ್ಲಿ ಹುರಿದುಕೊಂಡ ದ್ರಾಕ್ಷಿ ಗೋಡಂಬಿ ಸೇರಿಸಿ. ಚೆನ್ನಾಗಿ ಬೆರೆಸಿ. ಕ್ಯಾರೆಟ್ ಹಲ್ವಾ ರೆಡಿ.
2. ರಾವ ಕೇಸರಿ | ಸೂಜಿ ಹಲ್ವಾ-
ಬೇಕಾಗುವ ಸಾಮಗ್ರಿಗಳು:
½ ಕಪ್ ರವಾ
½ ಕಪ್ ಸಕ್ಕರೆ
2 ರಿಂದ 3 ಚಮಚ ತುಪ್ಪ
2 ರಿಂದ 3 ಏಲಕ್ಕಿ (ಪುಡಿಮಾಡಿದ್ದು)
ಸ್ವಲ್ಪ ಕೇಸರಿ ದಳ (ಬೇಕಿದ್ದರೆ ಹಾಲಿನಲ್ಲಿ ನೆನೆಸಿ)
1 ಕಪ್ ನೀರು
¼ ಕಪ್ ಹಾಲು
ಒಣ ಹಣ್ಣುಗಳು (ಡ್ರೈ ಫ್ರುಟ್ಸ್)
ತಯಾರಿಸುವ ವಿಧಾನ:
ಒಂದು ಬಾಣಲೆಯಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಸ್ವಲ್ಪ ಕಂದು ಬಣ್ಣಬರುವ ತನಕ ರವಾ ಹುರಿದುಕೊಳ್ಳಿ.
ಒಂದು ಬಾಣಲೆಯಲ್ಲಿ ನೀರು ಮತ್ತು ಹಾಲನ್ನು ಬೆರಿಸಿ ಅದಕ್ಕೆ ½ ಚಮಚ ತುಪ್ಪ ಸೇರಿಸಿ ಕುದಿಸಿ. ಈಗ ಹುರಿದ ರಾವಾವನ್ನು ನಿಧಾನವಾಗಿ ಅದಕ್ಕೆ ಹಾಕಿ ಅದು ಹದಕ್ಕೆ ಬರುವವರೆಗೂ ತಿರುವುತ್ತೀರಿ. ನಂತರ ಅದಕ್ಕೆ ಒಂದು ಬಟ್ಟಲು ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಸಕ್ಕರೆ ಸೇರಿಸಿ, ಒಂದು ಚಮಚ ತುಪ್ಪದ ಜೊತೆಗೆ ಕೇಸರಿ, ಸೇರಿಸಿ, ಒಣ ಹಣ್ಣುಗಳು (ಡ್ರೈ ಫ್ರುಟ್ಸ್) ಮತ್ತು ಏಲಕ್ಕಿ ಪುಡಿ ಸೇರಿಸಿ ಮುಚ್ಚಿ ಮತ್ತು 2 ರಿಂದ 4 ನಿಮಿಷ ಬೇಯಿಸಿದರೆ ರಾವ ಕೇಸರಿ ರೆಡಿ.
3. ಆಲೂಗಡ್ಡೆ ಹಲ್ವಾ-
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ: 300 ಗ್ರಾಂ (4-5 ಮಧ್ಯಮ ಗಾತ್ರ)
ಸಕ್ಕರೆ - 100 ಗ್ರಾಂ (1/2 ಕಪ್)
ತುಪ್ಪ - 2 ಟೇಬಲ್ ಚಮಚ
ಹಾಲು - 1 ಕಪ್
ಒಣದ್ರಾಕ್ಷಿ - 20-25
ಗೋಡಂಬಿ, ಬಾದಾಮಿ ಬೀಜಗಳು - 15-20
ಏಲಕ್ಕಿ - 5-6 (ಪುಡಿಮಾಡಿದ್ದು)
ತಯಾರಿಸುವ ವಿಧಾನ:
ಆಲೂಗಡ್ಡೆಗಳನ್ನು ತೊಳೆದು ಮತ್ತು ಬೇಯಿಸಿ. ನಂತರ, ಅವುಗಳ ಸಿಪ್ಪೆ ಸುಲಿದು ಮತ್ತು ಮ್ಯಾಶ್ ಮಾಡಿ. ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆಗಳನ್ನು ಅದಕ್ಕೆ ಹಾಕಿ ಹುರಿಯಿರಿ. ಅದಕ್ಕೆ ಹಾಲು, ಸಕ್ಕರೆ, ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ಮತ್ತು ಏಲಕ್ಕಿ ಪುಡಿ ಸೇರಿಸಿ. 6-7 ನಿಮಿಷಗಳ ಕಾಲ ತಿರುಗಿಸಿ. ನಿಮ್ಮ ಆಲೂಗೆಡ್ಡೆ ಹಲ್ವಾ ಸವಿಯಲು ಸಿದ್ಧವಾಗುತ್ತದೆ.
4. ಬೀಟ್‌ರೂಟ್ ಹಲ್ವಾ-
ಬೇಕಾಗುವ ಸಾಮಗ್ರಿಗಳು:
ಒಂದು ಕಪ್ ತುರಿದ ಬೀಟ್‌ರೂಟ್,
ಎರಡು ಕಪ್ ಹಾಲು,
ರುಚಿಗೆ ತಕ್ಕಷ್ಟು ಸಕ್ಕರೆ
ಏಲಕ್ಕಿ ಪುಡಿ,
ತುಪ್ಪ
ಸ್ವಲ್ಪ ಕೇಸರಿ ದಳ (ಬೇಕಿದ್ದರೆ)
ಸ್ವಲ್ಪ ಗೋಡಂಬಿ, ದ್ರಾಕ್ಷಿ
ತಯಾರಿಸುವ ವಿಧಾನ:
ತುರಿದ ಬೀಟ್‌ರೂಟ್‌ನ್ನು ಎರಡು ಚಮಚ ತುಪ್ಪದಲ್ಲಿ ಸ್ವಲ್ಪ ಹುರಿದುಕೊಳ್ಳಿ. ನಂತರ ಅದಕ್ಕೆ ಹಾಲು ಹಾಕಿ ಚೆನ್ನಾಗಿ ಬೇಯಿಸಿ. ಬೇಯಿಸುವಾಗ ತಳ ಹಿಡಿಯದಂತೆ ತಿರುವುತ್ತೀರಿ. ಬೀಟ್‌ರೂಟ್ ತುರಿ ಬೆಂದ ನಂತರ ಅದಕ್ಕೆ ಸಕ್ಕರೆ ಹಾಕಿ ಅದು ಕರಗುತ್ತಿದ್ದಂತೆಯೇ ಚೆನ್ನಾಗಿ ಹೊಂದಿಕೊಳ್ಳುವಂತೆ ಬೆರೆಸಿ ಹಾಗೂ ಸ್ವಲ್ಪ ಏಲಕ್ಕಿ ಪುಡಿಯನ್ನು ಬೆರೆಸಿ. ನಂತರ ಮತ್ತೆರಡು ಚಮಚ ತುಪ್ಪ ಸೇರಿಸಿ. ತುಪ್ಪದಲ್ಲಿ ಹುರಿದುಕೊಂಡ ದ್ರಾಕ್ಷಿ ಗೋಡಂಬಿ ಸೇರಿಸಿ. ಚೆನ್ನಾಗಿ ಬೆರೆಸಿ. ಬೀಟ್‌ರೂಟ್ ಹಲ್ವಾ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.