ಬೆಂಗಳೂರು: ನೆಲ್ಲಿಕಾಯಿಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಹಲವು ಅಂಶಗಳಿವೆ. ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಚಟ್ನಿ ಮಾಡಿಕೊಂಡು ತಿನ್ನಬಹುದು. ಅದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
ನೆಲ್ಲಿಕಾಯಿ
ಇಂಗು
ಮೆಂತೆ
ಧನಿಯಾ
ಹಸಿಮೆಣಸು
ಅರಸಿನ ಪುಡಿ
ಉಪ್ಪು
ಎಣ್ಣೆ
ಮಾಡುವ ವಿಧಾನ
ನೆಲ್ಲಿಕಾಯಿಯ ಬೀಜ ತೆಗೆದು ಜಜ್ಜಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಧನಿಯಾ, ಮೆಂತೆ, ಇಂಗು ಹಾಕಿ ಹುರಿಯಿರಿ. ನಂತರ ಹಸಿಮೆಣಸು ಹಾಕಿ ಬಾಡಿಸಿ. ಹುರಿದ ವಸ್ತುಗಳು, ಜಜ್ಜಿದ ನೆಲ್ಲಿಕಾಯಿ, ಅರಸಿನ ಪುಡಿ, ಉಪ್ಪು ಹಾಕಿ ನೀರು ಸೇರಿಸದೆ ರುಬ್ಬಿಕೊಳ್ಳಿ. ಈಗ ನೆಲ್ಲಿಕಾಯಿ ಒಣ ಚಟ್ನಿ ರೆಡಿ. ಇದನ್ನು ಕೆಲ ಸಮಯ ಶೇಖರಿಸಿಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ