ಬೆಂಗಳೂರು : ಮಕ್ಕಳು ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಅಂತವರು ಮಕ್ಕಳಿಗೆ ಮನೆಯಲ್ಲಿಯೇ ಹಣ್ಣುಗಳಿಂದ ತಯಾರಿಸಿದ ಕಸ್ಟರ್ಡ್ ಐಸ್ ಕ್ರೀಂ ಮಾಡಿಕೊಡಿ.
ಬೇಕಾಗುವ ಸಾಮಾಗ್ರಿಗಳು: ½ ಲೀಟರ್ ಹಾಲು, 2 ಟೇಬಲ್ ಚಮಚ ಕಸ್ಟರ್ಡ್ ಪೌಡರ್, 6 ಚಮಚ ಸಕ್ಕರೆ, ಹಣ್ಣುಗಳು
ಮಾಡುವ ವಿಧಾನ: ಹಾಲನ್ನು ಚೆನ್ನಾಗಿ ಕುದಿಸಿ. ಬಳಿಕ ಅದಕ್ಕೆ ನೀರಿನ ಜೊತೆ ಕರಗಿಸಿದ ಕಸ್ಟರ್ಡ್ ಪೌಡರ್ ನ್ನು ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಸಕ್ಕರೆ ಸೇರಿಸಿ ಕುದಿಸಿ. ಬಳಿಕ ಅದನ್ನು ತಣ್ಣಗಾಗಲು ಬಿಡಿ. ಬಳಿಕ ಅದಕ್ಕೆ ಚಿಕ್ಕಚಿಕ್ಕ ಪೀಸ್ ಆಗಿ ಕಟ್ ಮಾಡಿಕೊಂಡ ಬಾಳೆಹಣ್ಣು, ದ್ರಾಕ್ಷಿ, ಸೇಬುಹಣ್ಣಗಳನ್ನು ಮಿಕ್ಸ್ ಮಾಡಿ. ಇದನ್ನು ಮಕ್ಕಳಿಗೆ ತಿನ್ನಲು ನೀಡಿ.