ಇಂದು ನಿಮ್ಮ ಮನೆಯವರು ಕೇಳುವ ಮುನ್ನವೇ ನೀವು ಕಡಲೆಬೇಳೆ ಚಟ್ನಿ ಮಾಡಿ. ಸರಳವಾಗಿ, ಫಟಾಫಟ್ ತಯಾರಿಸುವ ಅಡುಗೆ ಎಂದರೆ ಹಲವರಿಗೆ ಇಷ್ಟವಾಗುತ್ತದೆ.
ಇನ್ನೇಕೆ ತಡ..? ಮನೆಯವರ ಮಚ್ಚುಗೆ ಪಡೆಯಲು ಈ ಸ್ವಾದಿಷ್ಟ ಚಟ್ನಿಯನ್ನು ತಯಾರಿಸಿ.
ಬೇಕಾಗುವ ಸಾಮಗ್ರಿಗಳು
* ಕಡಲೆಬೇಳೆ – ಅರ್ಧ ಕಪ್
* ಕಾಯಿತುರಿ-ಅರ್ಧ ಕಪ್
* ಕೆಂಪು ಮೆಣಸಿನ ಕಾಯಿ -ಮೂರು
* ಹುಣಸೆ ಹುಣ್ಣು – ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಅಡುಗೆಎಣ್ಣೆ- 4 ಚಮಚ
* ಸಾಸಿವೆ – ಒಂದು ಚಮಚ
* ಉದ್ದಿನ ಬೇಳೆ – 2 ಚಮಚ
* ಈರುಳ್ಳಿ (ಸಾಂಬಾರ್ ಈರುಳ್ಳಿ) – ಐದು
* ಕರೀಬೇವು- ಸ್ವಲ್ಪ
ಮಾಡುವ ವಿಧಾನ
* ಒಂದು ಪಾತ್ರೆಯಲ್ಲಿ ಅಡುಗೆಎಣ್ಣೆ ಹಾಕಿ ಬಿಸಿಮಾಡಿ ಕೆಂಪುಮೆಣಸು, ಕಡಲೆ ಬೇಳೆಯನ್ನು ಚಿಕ್ಕ ಉರಿಯಲ್ಲಿ ಕೊಂಚ ಕಾಲ ಹುರಿಯಿರಿ. ಬಳಿಕ ಮೆಣಸನ್ನು ಪಕ್ಕಕ್ಕಿಡಿ.
* ಈಗ ಉಳಿದ ಎಣ್ಣೆಯನ್ನು ಇದೇ ಪಾತ್ರೆಯಲ್ಲಿ ಹಾಕಿ ಸಾಸಿವೆ, ಉದ್ದಿನ ಬೇಳೆ, ಈರುಳ್ಳಿ ಮತ್ತು ಕರೀಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
* ಫ್ರೈ ಮಾಡಿಕೊಂಡ ಪದಾರ್ಥಗಳನ್ನು ಮಿಕ್ಸಿಯ ಜಾರ್ನೊಳಗೆ ಹಾಕಿ ರುಬ್ಬಿಕೊಳ್ಳಬೇಕು.
* ಕೊತ್ತಂಬರಿ ಸೊಪ್ಪು, ಸಾಸಿವೆ, ಈರುಳ್ಳಿ, ಕೆಂಪು ಮೆಣಸಿನ ಕಾಯಿ ಹಾಕಿ ಒಗ್ಗರಣೆ ತಯಾರಿಸಿಕೊಂಡು ರುಬ್ಬಿದ ಮಿಶ್ರಣಕ್ಕೆ ಹಾಕಿದರೆ ಸ್ವಾದಿಷ್ಟ ಚಟ್ನಿ ತಯಾರಾಗುತ್ತದೆ.