ನಮ್ಮಲ್ಲಿ ಶುಭ ಸಮಾರಂಭಗಳಲ್ಲಿ ಪಾಯಸವನ್ನು ಮಾಡುವುದು ಅದರಲ್ಲಿಯೂ ಬಗೆಬಗೆಯ ನಾನಾ ವಿಧದ ಪಾಯಸಗಳನ್ನು ಮಾಡಿ ಸವಿಯುವುದೆಂದರ ಎಲ್ಲಿಲ್ಲದ ಸಂಭ್ರಮ. ಸವತೆ ಬೀಜದ ಪಾಯಸವನ್ನು ಎರಡು ವಿಧವಾಗಿ ತಯಾರಿಸಬಹುದು. ಮನೆಯಲ್ಲಿ ಮಧುಮೇಹ ಇರುವವರೇ ಜಾಸ್ತಿ. ಆದ್ದರಿಂದ ಸಕ್ಕರೆಯನ್ನು ಸೇವಿಸುವುದಿಲ್ಲ ಎನ್ನುವವರು ಬೆಲ್ಲವನ್ನೂ ಹಾಕಿ ತಯಾರಿಸಿಕೊಂಡು ಸವಿಯಬಹುದು. ಹಾಗಾದರೆ ಸವತೆಬೀಜದ ಪಾಯಸವನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ..
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಸವತೆಬೀಜ
* ತುಪ್ಪ
* ಏಲಕ್ಕಿ ಪುಡಿ
* ಒಣ ದ್ರಾಕ್ಷಿ
* ಗೋಡಂಬಿ
* ಬಾದಾಮಿ
* ಹಾಲು
* ಸಕ್ಕರೆ
ತಯಾರಿಸುವ ವಿಧಾನ:
ಮೊದಲಿಗೆ ಸಕ್ಕರೆಯನ್ನು ಹಾಕಿ ಪಾಯಸವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.. ಮೊದಲು ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ನಂತರ ಬಾಣಲೆಗೆ ಸ್ವಲ್ಪ ತುಪ್ಪವನ್ನು ಹಾಕಿ ಸವತೆ ಬೀಜವನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ಅದಕ್ಕೆ ನೀರನ್ನು ಹಾಕಿ ಕುದಿಸಿ ಚೆನ್ನಾಗಿ ಕುದಿಯಬೇಕು. ನಂತರ ಅದಕ್ಕೆ ಸಕ್ಕರೆ , ಏಲಕ್ಕಿ ಪುಡಿ, ಹಾಲನ್ನು ಹಾಕಿ 1 ರಿಂದ 2 ನಿಮಿಷ ಕುದಿಸಿ ಅದಕ್ಕೆ ಈಗಾಗಲೇ ಹುರಿದುಕೊಂಡ ಗೋಡಂಬಿ ಮತ್ತು ದ್ರಾಕ್ಷಿಯನ್ನು ಪಾಯಸವು ಸವಿಯಲು ಸಿದ್ಧ.
ಈಗ ಬೆಲ್ಲವನ್ನು ಹಾಕಿ ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ..
ಬೆಲ್ಲವನ್ನು ಹಾಕಿ ತಯಾರಿಸುವುದೂ ಸಹ ಏನೂ ಬದಲಾವಣೆ ಇಲ್ಲ. ಸಕ್ಕರೆಯ ಬದಲು ಬೆಲ್ಲವನ್ನು ಉಪಯೋಗಿಸಬೇಕು. ಮೊದಲು ಡ್ರೈ ಪ್ರುಟ್ಸ್ ಅನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ನಂತರ ಅದೇ ತುಪ್ಪದಲ್ಲಿ ಸವತೆಬೀಜವನ್ನು ಹುರಿದುಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಒಂದು ಕಪ್ ಬೆಲ್ಲಕ್ಕೆ ಎರಡರಷ್ಚು ನೀರನ್ನು ಹಾಕಿ ಬೆಲ್ಲ ಕರಗುವವರೆಗೆ ಕುದಿಸಿ ಸೋಸಿಕೊಳ್ಳಬೇಕು. ನಂಚರ ಬೆಲ್ಲದ ನೀರಿಗೆ ಸವತೆಬೀಜಗಳನ್ನು ಹಾಕಿ ಅವುಗಳು ಮೃದು ಆಗುವವರೆಗೆ ಅಂದರೆ 7 ರಿಂದ 8 ನಿಮಿಷ ಕುದಿಸಿ ಅದಕ್ಕೆ ಏಲಕ್ಕಿ ಪುಡಿ ಮತ್ತು ಹುರಿದುಕೊಂಡ ಡ್ರೈ ಫ್ರುಟ್ಸ್ ಅನ್ನು ಹಾಕಬೇಕು. ನಂತರ (ಬೇಕಾದಲ್ಲಿ) ಅದರ ಮೇಲೆ ಹಾಲು ಮತ್ತು ತುಪ್ಪವನ್ನು ಹಾಕಿಕೊಂಡು ಸವಿಯಬಹುದು.