ಬೆಂಗಳೂರು: ಕೂಲ್ ಡ್ರಿಂಕ್ಸ್ ಯಾಕೆ ಬೇಕು? ಇನ್ಯಾಕೆ ಬಾಯಾರಿದಾಗ ಕೂಲ್ ಆಗಿ ಹೊಟ್ಟೆಗೆ ಸೇರಿಸಲು ಅಂತ ನೀವು ಹೇಳಬಹುದು. ಅದಷ್ಟೇ ಅಲ್ಲ. ಕೂಲ್ ಡ್ರಿಂಕ್ಸ್ ನಿಂದ ಇನ್ನೂ ಏನೇನೋ ಉಪಯೋಗವಿದೆ. ಅದು ಯಾವುದೆಂದು ನೋಡೋಣ.
ಪಾತ್ರೆ ಕಲೆ ತೆಗೆಯಲು
ಪಾತ್ರೆ ತಳ ಹಿಡಿದು ಕಲೆಯಾಗಿದೆ ಎಂದರೆ ಕಪ್ಪು ತಂಪು ಪಾನೀಯವನ್ನು ಪಾತ್ರೆಗೆ ಹಾಕಿ ಸ್ವಲ್ಪ ಹೊತ್ತು ಬಿಡಿ. ನಂತರ ತೊಳೆದುಕೊಂಡರೆ ಪಾತ್ರ ಮೊದಲಿನ ಬಣ್ಣಕ್ಕೆ ಬರುತ್ತದೆ. ಕೂಲ್ ಡ್ರಿಂಕ್ಸ್ ನಲ್ಲಿರುವ ಆಸಿಡ್ ಅಂಶ ಕಲೆ ಹೋಗಲಾಡಿಸುತ್ತದೆ.
ಶಾಯಿಯ ಕಲೆ ಹೋಗಲಾಡಿಸಲು
ಬಿಳಿ ಶರ್ಟ್ ಮೇಲೆ ಪೆನ್ ಕಲೆಯಾಯಿತೆಂದು ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಆ ಜಾಗಕ್ಕೆ ಸ್ವಲ್ಪ ಕೂಲ್ ಡ್ರಿಂಕ್ಸ್ ಹಚ್ಚಿ ಉಜ್ಜಿಕೊಳ್ಳಿ. ನಂತರ ಸೋಪ್ ಬಳಸಿ ತೊಳೆದುಕೊಳ್ಳಿ.
ಕೂದಲಿಗೆ
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಕೂಲ್ ಡ್ರಿಂಕ್ಸ್ ನಲ್ಲಿರುವ ರಾಸಾಯನಿಕ ಅಂಶ ನಮ್ಮ ಕೂದಲು ಜೀವ ಕಳೆ ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತದೆ. ಮತ್ತು ಕೂದಲುಗಳ ಬೇರು ಗಟ್ಟಿಗೊಳಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ