ಬೆಂಗಳೂರು: ಬಾಳೆಗೊನೆಯ ತುದಿಯಲ್ಲಿ ಬರುವ ಹೂವು ಅಥವಾ ಕುಂಡಿಗೆ ಭಾರೀ ಪೋಷಕಾಂಶ ಹೊಂದಿದೆ. ಇದರಲ್ಲಿ ಕಬ್ಬಿಣದ ಅಂಶ, ಫೈಬರ್ ನ ಅಂಶ ಜಾಸ್ತಿಯಿದೆಯಂತೆ. ಹೀಗಾಗಿ ಬಾಣಂತಿಗಳಿಗೂ ಇದನ್ನು ಕೊಡುತ್ತಾರೆ. ಇದರ ಸಾರು ರುಚಿಕರವೂ, ಆರೋಗ್ಯಕರವೂ ಹೌದು. ಮಾಡುವ ವಿಧಾನ ನೋಡಿ.
ಬೇಕಾಗುವ ಸಾಮಗ್ರಿಗಳು
ಕುಂಡಿಗೆ
ಬೆಲ್ಲ
ಹುಳಿ
ಖಾರದ ಪುಡಿ
ಉಪ್ಪು
ಒಗ್ಗರಣೆ ಸಾಮಾನು
ಮಾಡುವ ವಿಧಾನ
ಕುಂಡಿಗೆಯನ್ನು ಸಣ್ಣಗೆ ಹೆಚ್ಚಿ ಹುಣಸೆ ಹುಳಿ ನೀರಿನಲ್ಲಿ ಸ್ವಲ್ಪ ಹೊತ್ತು ಬಿಡಿ. ನಂತರ ಸ್ವಲ್ಪ ನೀರು ಬೆಲ್ಲ, ಹುಣಸೆ ಹುಳಿ, ಉಪ್ಪು, ಖಾರದ ಪುಡಿ ಹಾಕಿ ಚೆನ್ನಾಗಿ ಬೇಯಿಸಿ. ಕುಂಡಿಗೆ ಬಂದ ಮೇಲೆ ಮತ್ತಷ್ಟು ನೀರು ಹಾಕಿಕೊಂಡು ಒಂದು ಕುದಿ ಕುದಿಸಿ ಇಳಿಸಿ. ನಂತರ ಸಾಸಿವೆ, ಇಂಗು, ಮೆಣಸು, ಕರಿಬೇವು ಸೊಪ್ಪಿನ ಒಗ್ಗರಣೆ ಕೊಡಿ. ಇದು ಅನಾರೋಗ್ಯದಿಂದ ಬಾಯಿ ರುಚಿ ಹಾಳಾಗಿದ್ದರೂ ತಿನ್ನಬಹುದಾದ ರುಚಿಕರ ಸಾರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ