Webdunia - Bharat's app for daily news and videos

Install App

ಗರಂ ಗರಂ ಅವಲಕ್ಕಿ ಚಕ್ಕುಲಿ

Webdunia
ಬುಧವಾರ, 31 ಮೇ 2017 (16:42 IST)
ಸಾಯಂಕಾಲದ ಟೀ ಅಥವಾ ಕಾಫಿ ಜತೆ ಸವಿಯಲು ಈ ಅವಲಕ್ಕಿ ಚಕ್ಕುಲಿ ಮಾಡುವುದು ತುಂಬಾ ಸುಲಭ ಹಾಗೂ ತುಂಬಾ ರುಚಿ. ನೀವೂ ಟ್ರೈಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:
 
ಅವಲಕ್ಕಿ – 250 ಗ್ರಾಂ
ಹಸಿಮೆಣಸಿನಕಾಯಿ – 4
ಜೀರಿಗೆ- ಅರ್ಧ ಚಮಚ
ಇಂಗು – ಅರ್ಧ ಚಮಚ
ಎಣ್ಣೆ- ಕರಿಯಲು
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
* ರಾತ್ರಿ ಅಲವಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಪಾತ್ರೆಯಲ್ಲಿ ನೆನೆಹಾಕಿ. ಮರುದಿನ ಮುಂಜಾನೆ ನೀರು ಬಸಿದು ಅದಕ್ಕೆ ಇಂಗು, ಉಪ್ಪು, ಜೀರಿಗೆ ಹಾಗೂ ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿಕೊಂಡು ಮಿಕ್ಸಿಯಲ್ಲಿ ಅಥವಾ ಒರಳಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿರಿ.
 
* ನಂತರ ಬಿಸಿಲಿನಲ್ಲಿ ಬಿಳಿ ಬಟ್ಟೆ ಹಾಕಿ ಅದರ ಮೇಲೆ ಚೆಕ್ಕುಲಿ ಒರಳಿನಲ್ಲಿ ಹಿಟ್ಟು ತುಂಬಿ ಚಕ್ಕುಲಿಯನ್ನು ಒತ್ತಿ ಚೆನ್ನಾಗಿ ಒಣಗಿಸಿಕೊಳ್ಳಿರಿ.
 
* ಚಕ್ಕುಲಿಗಳು ಚನ್ನಾಗಿ ಒಣಗಿದ ಮೇಲೆ  ಒಂದು ಬಾಣೆಲೆಯಲ್ಲಿ ಎಣ್ಣೆ ಕಾಯಿಸಿ ನಂತರ ಚೆಕ್ಕುಲಿ ಕರಿಯಿರಿ.
 
* ಈಗ ರುಚಿಕರವಾದ ಗರಂ ಗರಂ ಅವಲಕ್ಕಿ ಚಕ್ಕುಲಿ ಸವಿಯಲು ಸಿದ್ಧ. ಬಿಡುವಿನ ಸಮಯದಲ್ಲಿ ಕಾಲ ಕಳೆಯಲು ಇದು ಉಪಯುಕ್ತ.
 

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments