ಸಾಯಂಕಾಲದ ಟೀ ಅಥವಾ ಕಾಫಿ ಜತೆ ಸವಿಯಲು ಈ ಅವಲಕ್ಕಿ ಚಕ್ಕುಲಿ ಮಾಡುವುದು ತುಂಬಾ ಸುಲಭ ಹಾಗೂ ತುಂಬಾ ರುಚಿ. ನೀವೂ ಟ್ರೈಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
ಅವಲಕ್ಕಿ – 250 ಗ್ರಾಂ
ಹಸಿಮೆಣಸಿನಕಾಯಿ – 4
ಜೀರಿಗೆ- ಅರ್ಧ ಚಮಚ
ಇಂಗು – ಅರ್ಧ ಚಮಚ
ಎಣ್ಣೆ- ಕರಿಯಲು
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
* ರಾತ್ರಿ ಅಲವಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಪಾತ್ರೆಯಲ್ಲಿ ನೆನೆಹಾಕಿ. ಮರುದಿನ ಮುಂಜಾನೆ ನೀರು ಬಸಿದು ಅದಕ್ಕೆ ಇಂಗು, ಉಪ್ಪು, ಜೀರಿಗೆ ಹಾಗೂ ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿಕೊಂಡು ಮಿಕ್ಸಿಯಲ್ಲಿ ಅಥವಾ ಒರಳಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿರಿ.
* ನಂತರ ಬಿಸಿಲಿನಲ್ಲಿ ಬಿಳಿ ಬಟ್ಟೆ ಹಾಕಿ ಅದರ ಮೇಲೆ ಚೆಕ್ಕುಲಿ ಒರಳಿನಲ್ಲಿ ಹಿಟ್ಟು ತುಂಬಿ ಚಕ್ಕುಲಿಯನ್ನು ಒತ್ತಿ ಚೆನ್ನಾಗಿ ಒಣಗಿಸಿಕೊಳ್ಳಿರಿ.
* ಚಕ್ಕುಲಿಗಳು ಚನ್ನಾಗಿ ಒಣಗಿದ ಮೇಲೆ ಒಂದು ಬಾಣೆಲೆಯಲ್ಲಿ ಎಣ್ಣೆ ಕಾಯಿಸಿ ನಂತರ ಚೆಕ್ಕುಲಿ ಕರಿಯಿರಿ.
* ಈಗ ರುಚಿಕರವಾದ ಗರಂ ಗರಂ ಅವಲಕ್ಕಿ ಚಕ್ಕುಲಿ ಸವಿಯಲು ಸಿದ್ಧ. ಬಿಡುವಿನ ಸಮಯದಲ್ಲಿ ಕಾಲ ಕಳೆಯಲು ಇದು ಉಪಯುಕ್ತ.