ನಮ್ಮ ದಿನನಿತ್ಯದ ಆಹಾರದ ಮೂಲಕ ನಮ್ಮ ದೇಹಕ್ಕೆ ಹೆಚ್ಚಿನ ಫೋಷಕಾಂಶಗಳನ್ನು ಒದಗಿಸಬಹುದು ಎಂಬುದು ಎಲ್ಲರಿಗೂ ತಿಳಿದಿರುವಂತದೇ ಅಷ್ಟೇ ಅಲ್ಲ ನಾವು ತಿನ್ನುವ ಆಹಾರವು ಆರೋಗ್ಯಕಾರಿಯಾಗಿದ್ದಲ್ಲಿ ಮಾತ್ರವೇ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅಂತಹ ಒಂದು ತರಕಾರಿ ಪದಾರ್ಥಗಳಲ್ಲಿ ಆಲೂ ಕುಡಾ ಒಂದು ಇದರಿಂದ ತರಹೇವಾರಿ ಅಡುಗೆಗಳನ್ನು ತಯಾರಿಸಬಹುದು.
ಅದ್ಯಾವುದು ಅಂತೀರಾ ಆಲೂ ಸಬ್ಬಿ ಉತ್ತರ ಭಾರತದಲ್ಲಿ ಇದು ಹೆಚ್ಚಾಗಿ ಪ್ರಚಲಿತದಲ್ಲಿದ್ದು ತಿನ್ನಲು ಬಲು ರುಚಿಯಾಗಿರುತ್ತದೆ ಇದನ್ನು ಚಪಾತಿ, ರೊಟ್ಟಿಯೊಂದಿಗೆ ಸವಿಯಬಹುದಾಗಿದೆ. ನೀವು ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಚಿಕ್ಕ ಗಾತ್ರದ ಆಲೂಗೆಡ್ಡೆ (ಬೇಬಿ ಆಲೂ) ಬೇಯಿಸಿ ಸಿಪ್ಪೆ ತೆಗೆದಿದ್ದು 4-6
ಜೀರಿಗೆ ಮತ್ತು ಸಾಸಿವೆ
ಹಸಿಮೆಣಸು
ಕರಿಬೇವು
ಕಲ್ಲುಪ್ಪು
ಅರಿಸಿನ
ಕೊತ್ತಂಬರಿ ಪುಡಿ
ಮೆಣಸಿನ ಪುಡಿ
ಎಣ್ಣೆ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾಯಿಸಿ ಅದಕ್ಕೆ ಬೇಯಿಸಿದ ಆಲೂಗೆಡ್ಡೆ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಒಂದು ಸಣ್ಣ ಪಾತ್ರೆಯಲ್ಲಿ ಅರಿಸಿನ, ಉಪ್ಪು, ಕೊತ್ತಂಬರಿ ಪುಡಿ, ಮೆಣಸಿನ ಪುಡಿ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಸ್ವಲ್ಪ ದ್ರವ ರೂಪದ ಮಿಶ್ರಣವನ್ನು ತಯಾರಿಸಿಕೊಳ್ಳಿ. ನಂತರ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಸಿದ್ದಪಡಿಸಿದ ಮಿಶ್ರಣವನ್ನು ಹಾಕಿ ಅದು ಬಿಸಿಯಾದಾಗ ಅದಕ್ಕೆ ಕರಿಬೇವು, ಜೀರಿಗೆ, ಸಾಸಿವೆ ಹಾಕಿ ನಂತರ ಸ್ವಲ್ಪ ಮೆಣಸಿನ ಪುಡಿ ಹಾಕಿ. ಬೆರೆಸಿ ಅದರಲ್ಲಿ ಕತ್ತರಿಸಿದ ಹಸಿಮೆಣಸನ್ನು ಹಾಕಿರಿ. ತದನಂತರ ಅದಕ್ಕೆ ಹುರಿದ ಆಲೂಗೆಡ್ಡೆ ಹಾಕಿ ಚೆನ್ನಾಗಿ ಬೆರೆಸಿರಿ ಅದನ್ನು 1 -2 ನಿಮಿಷಕಾಲ ಬೇಯಲು ಬಿಟ್ಟು ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಆಲೂ ಸಬ್ಜಿ ಸವಿಯಲು ಸಿದ್ಧ.