ನೀವು ಮೀನು ಖಾದ್ಯ ಪ್ರಿಯರಾಗಿದ್ರೆ ಅದನ್ನು ರುಚಿಕರವಾಗಿ ಆಸ್ವಾದಿಸಲು ಈ ರೆಸಿಪಿ ಪರ್ಫೆಕ್ಟ್ ಆಗಿದೆ. ಉತ್ತರ ಭಾರತ ಭಾಗದಲ್ಲಿ ಫೇಮಸ್ ಆಗಿರೋ ತಂದೂರಿ ಫಿಶ್ ಟಿಕ್ಕಾವನ್ನು ಓವನ್ ಅಥವಾ ಗ್ರಿಲ್ ಪ್ಯಾನ್ನಲ್ಲಿಯೂ ತಯಾರಿಸಬಹುದು.
ತಂದೂರಿ ಫಿಶ್ ಟಿಕ್ಕಾ ತಯಾರಿಸಲು ಬಾರ್ಬೆಕ್ಯೂ ಮಾಡೋದು ಉತ್ತಮ ಹಾಗೂ ನಿಮ್ಮಿಷ್ಟದ ಯಾವುದೇ ಮೀನುಗಳನ್ನು ಇದಕ್ಕಾಗಿ ಆಯ್ಕೆ ಮಾಡಬಹುದು. ಟೇಸ್ಟಿ ತಂದೂರಿ ಫಿಶ್ ಟಿಕ್ಕಾ ಮಾಡೋದು ಹೇಗೆಂದು ನೋಡೋಣ.
ಬೇಕಾಗುವ ಪದಾರ್ಥಗಳು
ಮೀನು – ಅರ್ಧ ಕೆಜಿ
ದಪ್ಪ ಮೊಸರು – 1 ಕಪ್
ಎಣ್ಣೆ – 5 ಟೀಸ್ಪೂನ್
ರುಬ್ಬಿಕೊಂಡ ಈರುಳ್ಳಿ – 1
ಶುಂಠಿ ಪೇಸ್ಟ್ – 1 ಟೀಸ್ಪೂನ್
ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ನಿಂಬೆ ರಸ – 5 ಟೀಸ್ಪೂನ್
ಅರಿಶಿನ – 4 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – 1 ಟೀಸ್ಪೂನ್
ಜಾಯಿಕಾಯಿ ಪುಡಿ – ಕಾಲು ಟೀಸ್ಪೂನ್
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
ಮಾಡುವ ವಿಧಾನ
* ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ದಪ್ಪ ಮೊಸರು, ಎಣ್ಣೆ, ರುಬ್ಬಿಕೊಂಡ ಈರುಳ್ಳಿ, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ, ಅರಿಶಿನ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಜಾಯಿಕಾಯಿ ಪುಡಿ, ಕೆಂಪು ಮೆಣಸಿನಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
* ಈಗ ಮೀನುಗಳನ್ನು ಮ್ಯಾರಿನೇಶನ್ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕೋಟ್ ಮಾಡಬೇಕು.
* ಈಗ ಪಾತ್ರೆಯ ಮುಚ್ಚಳ ಮುಚ್ಚಿ, ಒಂದು ಗಂಟೆ ಫ್ರಿಜ್ನಲ್ಲಿಡಿ.
* ಈಗ ಮೀನುಗಳನ್ನು ಓರೆಗಳಿಗೆ ಸಿಕ್ಕಿಸಿ, ಅದನ್ನು ಗ್ರಿಲ್ ಪ್ಯಾನ್ ಅಥವಾ ಓವನ್ನಲ್ಲಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿಕೊಳ್ಳಿ.
* ಇದೀಗ ತಂದೂರಿ ಫಿಶ್ ಟಿಕ್ಕಾ ರೆಡಿಯಾಗಿದ್ದು, ಗ್ರೀನ್ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ.