ನವದೆಹಲಿ: ಪ್ರಧಾನಿ ಮೋದಿ ಮೇಲೆ ಮತ್ತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ನಿರುದ್ಯೋಗ ಸೃಷ್ಟಿಗೆ ಮೋದಿ ನಿರ್ಮಿತ ವಿನಾಶವೇ ಕಾರಣ ಎಂದಿದ್ದಾರೆ.
ತಾಜ್ ಮಹಲ್ ಬಗ್ಗೆ ನಡೆಯುತ್ತಿರುವ ವಿವಾದಿತ ಚರ್ಚೆಗಳನ್ನು ನೋಡಿ ಇಡೀ ಜಗತ್ತೇ ನಮ್ಮನ್ನು ನೋಡಿ ನಗುತ್ತಿದೆ. ಮೂರು ವರ್ಷಗಳ ಎನ್ ಡಿಎ ಆಡಳಿತದಿಂದ ದೇಶ ವಿಪತ್ತಿನತ್ತ ಸಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಎಂಟೆದೆಯ ಬಂಟ ಎನ್ನುವ ಅವರ ಅನುಯಾಯಿಗಳ ಮಾತನ್ನು ವ್ಯಂಗ್ಯವಾಗಿ ಹೇಳಿದ ರಾಹುಲ್ ಪ್ರಧಾನಿಗೆ ಎದೆ ಮಾತ್ರ ದೊಡ್ಡದು, ಹೃದಯ ತೀರಾ ಚಿಕ್ಕದು ಎಂದಿದ್ದಾರೆ. ಮತ್ತೆ ಜಿಎಸ್ ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದ ರಾಹುಲ್, ಜಿಎಸ್ ಟಿಯಿಂದಾಗಿ ಸಣ್ಣ ಕೈಗಾರಿಕೋದ್ಯಮ ನರಳುತ್ತಿದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ