ನವದೆಹಲಿ: ಪ. ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಬಹಿರಂಗವಾಗಿ ಪ್ರಧಾನಿ ಮೋದಿ ಬಗ್ಗೆ ಮೃದು ದೋರಣೆ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೇಲೆ ಕೆಂಡಕಾರಿದ್ದಾರೆ.
ಬಿಜೆಪಿಯ ಚಾಣಕ್ಷ್ಯ ಜೋಡಿ ಎಂದೇ ಜನಪ್ರಿಯರಾಗಿರುವ ಮೋದಿ-ಶಾ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮೇಲೆ ಸದಾ ಕೆಂಡಕಾರುತ್ತಿದ್ದ ಮಮತಾ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಮೃದು ಧೋರಣೆ ತಳೆದಿದ್ದಾರೆ.
ಪ್ರಧಾನಿ ಮೋದಿ ಎಂದರೆ ನನಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಅಮಿತ್ ಶಾ ಡೇಂಜರಸ್ ವ್ಯಕ್ತಿ. ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಕೇಂದ್ರ ಸಚಿವರ ಸಭೆ ನಡೆಸಲು ಹೇಗೆ ಸಾಧ್ಯ? ಈ ದೇಶದಲ್ಲಿ ಪ್ರಧಾನಿ ಎಂಬ ಹುದ್ದೆಯಿಲ್ಲವೇ? ಅವರು ಇದನ್ನು ನಿಭಾಯಿಸಬೇಡವೇ?’ ಎಂದು ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಡಿ ಕಾರಿದ್ದಾರೆ.