ನವದೆಹಲಿ: ಅರುಣ್ ಜೇಟ್ಲಿ ತಮ್ಮ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಎದುರಿಸುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ಸ್ವತಃ ಅವರ ಪರ ನ್ಯಾಯವಾದಿ ರಾಮ್ ಜೇಠ್ಮಲಾನಿ ತಿರುಗಿಬಿದ್ದಿದ್ದಾರೆ.
ರಾಮ್ ಜೇಠ್ಮಲಾನಿ ಕೇಜ್ರಿವಾಲ್ ಪರ ವಾದ ಮಂಡಿಸುತ್ತಿದ್ದರು. ಆದರೆ ಅವರೀಗ ಆ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಅದು ನ್ಯಾಯಾಲಯದಲ್ಲಿ ಜೇಟ್ಲಿ ವಿರುದ್ಧ ರಾಮ್ ಜೇಠ್ಮಲಾನಿ ಕೆಟ್ಟ ಪದ ಬಳಕೆ ಮಾಡಿದ್ದಕ್ಕೆ ಮತ್ತೊಂದು ಪ್ರಕರಣ ದಾಖಲಾದ ಮೇಲೆ.
ಇದೀಗ ವ್ಯಾಪಕ ಚರ್ಚೆಗೆ ಗುರಿಯಾಗಿದ್ದು, ನಿಮ್ಮ ವಿರುದ್ಧ ಕೆಟ್ಟ ಪದ ಬಳಕೆ ಮಾಡಲು ಸ್ವತಃ ಸಿಎಂ ಕೇಜ್ರಿವಾಲ್ ಸೂಚಿಸಿದ್ದರು ಎಂದು ಇದೀಗ ರಾಮ್ ಜೇಠ್ಮಲಾನಿ ಅರುಣ್ ಜೇಟ್ಲಿ ಬಳಿ ಬಾಂಬ್ ಸಿಡಿಸಿದ್ದಾರೆ. ಹೀಗಾಗಿ ನಾನು ಕೆಟ್ಟ ಪದ ಬಳಕೆ ಮಾಡಲು ಸೂಚಿಸಿರಲಿಲ್ಲ ಎಂದು ಹೇಳುತ್ತಿದ್ದ ಕೇಜ್ರಿವಾಲ್ ಗೆ ಸಂಕಷ್ಟ ಎದುರಾಗಿದೆ. ಕೇಜ್ರಿವಾಲ್ ವಿರುದ್ಧ ಅರುಣ್ ಜೇಟ್ಲಿ ದೆಹಲಿ ಕೋರ್ಟ್ ನಲ್ಲಿ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು.