ನವದೆಹಲಿ: ಪಾಕಿಸ್ತಾನದ ಸಹಾಯದೊಂದಿಗೆ ಭಾರತದ ಮೇಲೆ ದಾಳಿ ನಡೆಸಲು ಚೀನಾ ಯೋಜನೆ ರೂಪಿಸಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಆರೋಪಿಸಿದ್ದಾರೆ.
‘ಭಾರತಕ್ಕೆ ಹಲವು ಕಡೆಯಿಂದ ಅಪಾಯವಿದೆ. ಆದರೆ ದೊಡ್ಡ ಶತ್ರು ಎಂದರೆ ಚೀನಾ. ಇದು ನಮ್ಮ ದೇಶವನ್ನು ಅತಿಕ್ರಮಿಸಲು ಯತ್ನಿಸುತ್ತಲೇ ಇದೆ. ನಮ್ಮ ಯೋಧರ ತಾಕತ್ತಿನಿಂದಾಗಿ ಸಫಲವಾಗಿಲ್ಲ.
ಹೀಗಾಗಿ ಪಾಕಿಸ್ತಾನದೊಂದಿಗೆ ಸೇರಿಕೊಂಡು ಭಾರತದ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದೆ. ಉಭಯ ರಾಷ್ಟ್ರಗಳೂ ಜತೆ ಸೇರಿದರೆ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುಟ್ಟಿ. ಹಾಗಾಗದಂತೆ ನಾವು ತಡೆಯಬೇಕು’ ಎಂದು ಮಾಜಿ ರಕ್ಷಣಾ ಸಚಿವರೂ ಆಗಿರುವ ಮುಲಾಯಂ ಅಭಿಪ್ರಾಯಪಟ್ಟಿದ್ದಾರೆ.