ನವದೆಹಲಿ: ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಬಿಹಾರ ರಾಜ್ಯಪಾಲ ಹುದ್ದೆಗೆ ರಾಮನಾಥ್ ಕೊವಿಂದ್ ರಾಜೀನಾಮೆ ನೀಡಿದ್ದಾರೆ.
ದೆಹಲಿಗೆ ತೆರಳಿದ್ದ ರಾಮನಾಥ್ ಕೋವಿಂದ್ ಅವರು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ತಮ್ಮ ರಾಜಿನಾಮೆ ಪತ್ರ ಸಲ್ಲಿಕೆ ಮಾಡಿದ್ದು, ಪ್ರಣಬ್ ಮುಖರ್ಜಿ ಅವರು ಕೋವಿಂದ್ ಅವರ ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ. ಅಲ್ಲದೇ ಪ್ರಣಬ್ ಮುಖರ್ಜಿ ಅವರು ರಾಮನಾಥ್ ಕೋವಿಂದ್ ಅವರಿಗೆ ಶುಭಾಷಯ ತಿಳಿಸಿದ್ದಾರೆ.
ರಾಮನಾಥ್ ಕೋವಿಂದ್ ಅವರ ರಾಜಿನಾಮೆಯಿಂದ ತೆರವಾಗಿರುವ ಬಿಹಾರ ರಾಜ್ಯಪಾಲ ಹುದ್ದೆಯ ಜವಾಬ್ದಾರಿಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಕೇಶರಿನಾಥ್ ತ್ರಿಪಾಠಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.