ಬೆಂಗಳೂರು:ಜಿಎಸ್ ಟಿ ಜಾರಿಯಾದ ಹಿನ್ನಲೆಯಲ್ಲಿ ರೆಸ್ಟ್ರೋರೆಂಟ್ ಗಳಲ್ಲಿ ಕಾಫಿ, ತಿಂಡಿ ರೇಟ್ ಗಳು ಗಗನಕ್ಕೇರಿವೆ. ಮುಂಜಾನೆ ಬಿಸಿ ಬಿಸಿ ಕಾಫಿ ಹೀರಲೆಂದು ಹೋಟೆಲ್ ಗಳಿಗೆ ತೆರಳಿದ ಬೆಂಗಳೂರು ಗ್ರಾಹಕರಿಗೆ ಕಾಫಿ ಬಿಸಿ ಜತೆ ಜಿಎಸ್ ಟಿ ಬಿಸಿಯೂ ತಟ್ಟಿ ಬಾಯಿಸುಟ್ಟುಕೊಳ್ಳುವಂತಾಗಿದೆ.
ಈವರೆಗೆ ಕಾಫಿ, ಟೀ.ಗೆ 20 ರೂ. ನೀಡುತ್ತಿದ್ದ ಗ್ರಾಹಕ ಜಿಎಸ್‌ಟಿಯಿಂದಾಗಿ ಇಂದು ಶೇ.18ರಷ್ಟು ಹೆಚ್ಚಿನ ಹಣ ನೀಡುವಂತಾಗಿದೆ. ಅಂದರೆ 20 ರೂಗೆ ಸಿಗುತ್ತಿದ್ದ ಕಾಪಿಗೆ ಇಂದು ಒಟ್ಟು 38 ರೂ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಿಂಡಿ ವಿಷಯದಲ್ಲಿಯೂ ಕೂಡ ಇದೇ ರೀತಿಯ ದರ ಹೆಚ್ಚಳ ಮಾಡಲಾಗಿದೆ.
ಈವರೆಗೆ ಶೇ.4 ಮತ್ತು ಶೇ.6 ತೆರಿಗೆ ಸೇರಿ ಒಟ್ಟು ಶೇ.10ರಷ್ಟು ತೆರಿಗೆ ಪಾವತಿ ಮಾಡುತ್ತಿದ್ದ ರೆಸ್ಟೋರೆಂಟ್‌ಗಳು ಇದೀಗ ಶೇ.18ರಷ್ಟು ತೆರಿಗೆ ಪಾವತಿ ಮಾಡಬೇಕಿದೆ. ಶೇ.8ರಷ್ಟು ಹೆಚ್ಚುವರಿ ಪಾವತಿ ಮಾಡುತ್ತಿದ್ದು, ಇದನ್ನು ಗ್ರಾಹಕರಿಂದಲೇ ವಸೂಲಿ ಮಾಡಲಾಗುತ್ತಿದೆ. ಆದರೆ ಜನಸಾಮಾನ್ಯರೇ ಹೆಚ್ಚಾಗಿ ಹೋಗುವ ದರ್ಶಿನಿಗಳಲ್ಲಿ ಯಾವುದೇ ರೀತಿಯ ದರ ಬದಲಾವಣೆ ಮಾಡಿಲ್ಲ.