Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರ್‌ಎಸ್ಎಸ್ ಸೇರದಿದ್ರೆ ನೀವು ಹಿಂದೂವೇ ಅಲ್ಲ ಎಂದ ಬಿಜೆಪಿ ಶಾಸಕ

ಆರ್‌ಎಸ್ಎಸ್ ಸೇರದಿದ್ರೆ ನೀವು ಹಿಂದೂವೇ ಅಲ್ಲ ಎಂದ ಬಿಜೆಪಿ ಶಾಸಕ

ರಾಮಕೃಷ್ಣ ಪುರಾಣಿಕ

ನವದೆಹಲಿ , ಮಂಗಳವಾರ, 6 ಫೆಬ್ರವರಿ 2018 (19:34 IST)
ಆರ್‌ಎಸ್ಎಸ್ ಕೈಗೊಳ್ಳುವ ಪ್ರತಿದಿನದ ಸಭೆಗಳಾದ 'ಶಾಖೆಗಳಿಗೆ' ಹೋಗದವರು ಹಿಂದೂಗಳೇ ಅಲ್ಲ ಎಂದು ಹೈದರಾಬಾದಿನ ಶಾಸಕರೊಬ್ಬರು ಹೇಳಿದ್ದಾರೆ.
ಶಾಸಕರಾದ ಟಿ ರಾಜಾ ಸಿಂಗ್ ಅವರು "ಆರ್‌ಎಸ್ಎಸ್ ಎಂಬುದು ಕಾರ್ಖಾನೆ ಇದ್ದಂತೆ" ಅದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರಂತಹ "ಮಾದರಿ ವ್ಯಕ್ತಿಗಳನ್ನು" ತಯಾರಿಸುತ್ತದೆ. ಭಾನುವಾರದಂದು ಮಧ್ಯಪ್ರದೇಶದ ಚುನಾವಣಾ ಪ್ರಚಾರದ ಸಭೆಯಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
 
"ನಿಮ್ಮನ್ನು ಹತ್ತಿರದ ಆರ್‌ಎಸ್ಎಸ್‌ನ ಶಾಖೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಎಲ್ಲರಿಗೂ ನಾನು ವಿನಂತಿಸುತ್ತೇನೆ. ಆರ್‌ಎಸ್ಎಸ್‌ನಲ್ಲಿ ಸೇರ್ಪಡೆಗೊಳ್ಳದ ಯಾವ ಹಿಂದೂ ನಿಜವಾದ ಹಿಂದೂವೇ ಅಲ್ಲ ಮತ್ತು ಅವನು ನಮ್ಮ ರಾಷ್ಟ್ರದ ಸೇವೆಯನ್ನು ಸಲ್ಲಿಸುವಲ್ಲಿ ಅಸಮರ್ಥನಾಗಿರುತ್ತಾನೆ" ಎಂದು ಮಧ್ಯಪ್ರದೇಶದ ನೀಮಚ್ ಜಿಲ್ಲೆಯಲ್ಲಿ ತಮ್ಮ ರಾಲಿಯಲ್ಲಿ ನೆರೆದಿದ್ದ ಬೃಹತ್ ಜನರ ಸಮೂಹಕ್ಕೆ ರಾಜಾ ಸಿಂಗ್ ಅವರು ಹೇಳಿದ್ದಾರೆ.
 
ಮುಂದುವರಿದಂತೆ ಬಿಜೆಪಿಯ ಈ ಶಾಸಕರು, ಭಾರತದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ, ಅವರು ಯಾವುದೇ ಧರ್ಮದವರಾಗಿದ್ದರೂ ಸಹ 'ಭಾರತ್ ಮಾತಾ ಕಿ ಜೈ' ಮತ್ತು 'ವಂದೇ ಮಾತರಂ' ಹೇಳಲೇಬೇಕು ಇಲ್ಲವಾದಲ್ಲಿ ಅವರಿಗೆ "ಈ ದೇಶವನ್ನು ತೊರೆಯಲು ಮುಕ್ತ ಅವಕಾಶವಿದೆ" ಎಂದರು. ವಿಶ್ವದ ಯಾವುದೇ ದೇಶವು ಶತ್ರು ದೇಶದ ಜನರನ್ನು ಹೊಂದುವುದು ಅಥವಾ ಭಯೋತ್ಪಾದಕರನ್ನು ಹೊಂದುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು.
 
"ಬೇರೆ ಯಾವುದೇ ದೇಶವು 'ಭಾರತ್ ಮಾತಾ ಕೀ ಜೈ' ಎಂದು ಹೇಳುವ ಯಾರನ್ನೂ ಸಹಿಸುವುದಿಲ್ಲ ಆದರೆ ನಮ್ಮ ದೇಶದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಹೇಳುವ ಮತ್ತು ಅಫ್ಝಲ್ ಗುರುವಿನಂತಹ ಭಯೋತ್ಪಾದಕ ಜನರನ್ನು ಹೊಂದಿದ್ದೇವೆ ಎಂದರು. ಕಾಶ್ಮೀರಿ ಪ್ರತ್ಯೇಕತಾವಾದಿಯಾಗಿದ್ದ ಗುರು, 2001 ರ ಭಾರತೀಯ ಸಂಸತ್ತಿನ ದಾಳಿಯಲ್ಲಿ ಅಪರಾಧಿಯಾಗಿದ್ದ ಅವನನ್ನು 2013 ರಲ್ಲಿ ಗಲ್ಲಿಗೇರಿಸಲಾಯಿತು.
 
ಲವ್ ಜಿಹಾದ್‌ನಂತಹ "ದುಷ್ಕೃತ್ಯಗಳ" ವಿರುದ್ಧ ಹೋರಾಡುವ ಮೂಲಕ ತಮ್ಮ ಧರ್ಮದ ಸುಧಾರಣೆಗಾಗಿ ಕೆಲಸ ಮಾಡುವಂತೆ ಹಿಂದೂಗಳನ್ನು ರಾಜಾ ಕೇಳಿಕೊಂಡರು ಮತ್ತು ಕ್ರಿಶ್ಚಿಯನ್ ಮಿಷನರಿಗಳು ಹಣದ ಆಮಿಷವೊಡ್ಡಿ ಮಂತಾತರಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾನೂನು, ಸುವ್ಯವಸ್ಥೆ ಹದಗೆಟ್ಟ ದಾಖಲೆ ಬಹಿರಂಗಕ್ಕೆ ಸವಾಲು