ನೋಯ್ಡಾ: ಫೇಸ್ ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿದ ಹತಾಶೆಯಿಂದ 27 ವರ್ಷದ ಯುವಕನೋರ್ವ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.
ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಯುವತಿಗೆ ತಾನು ಶ್ರೀಮಂತ ಉದ್ಯಮಿಯ ಪುತ್ರ ಎಂದು ಫೇಕ್ ಐಡಿ ಮಾಡಿಕೊಂಡಿದ್ದ ಆರೋಪಿ ಸುಮಾರು 6 ಲಕ್ಷ ರೂ.ಗಳ ಹಣ ವಸೂಲಿ ಮಾಡಿದ್ದ. ಆತನ ವಂಚನೆ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಯುವತಿ ಅನ್ ಫ್ರೆಂಡ್ ಮಾಡಿದ್ದಳು.
ಇದರಿಂದ ಆಕ್ರೋಶಗೊಂಡ ಆತ ಆಕೆಯನ್ನು ಹೋಟೆಲ್ ಒಂದಕ್ಕೆ ಬಲವಂತವಾಗಿ ಕರೆದೊಯ್ದು ಅತ್ಯಾಚಾರವೆಸಗಿದ್ದ. ಅಲ್ಲದೆ ಕೃತ್ಯದ ವಿಡಿಯೋ ಮಾಡಿಕೊಂಡು 7.5 ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದ. ಕೊನೆಗೆ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ.