Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೇಂದ್ರ ಸಚಿವರ ಮೊಟ್ಟೆಗಳನ್ನು ಎಸೆದ ಯುವ ಕಾಂಗ್ರೆಸ್ ಕಾರ್ಯಕರ್ತರು

ಕೇಂದ್ರ ಸಚಿವರ ಮೊಟ್ಟೆಗಳನ್ನು ಎಸೆದ ಯುವ ಕಾಂಗ್ರೆಸ್ ಕಾರ್ಯಕರ್ತರು
ಭುವನೇಶ್ವರ್ , ಶನಿವಾರ, 10 ಜೂನ್ 2017 (18:31 IST)
ಮಧ್ಯಪ್ರದೇಶದ ಮಂಡ್ಸೌರ್‌ನಲ್ಲಿ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ ಏಳು ರೈತರನ್ನು ಹತ್ಯೆಗೈದಿರುವುದನ್ನು ವಿರೋಧಿಸಿ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ಅವರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಧ್ವಜ ತೋರಿಸಿ ಮೊಟ್ಟೆಗಳನ್ನು ಎಸೆದ ಘಟನೆ ವರದಿಯಾಗಿದೆ.
 
ಜತಾನಿ ಪಟ್ಟಣದಲ್ಲಿ ಆಯೋಜಿಸಲಾದ "ಸಬ್ಕಾ ಸಾತ್ ಸಬ್ಕಾ ವಿಕಾಸ್" ಕಾರ್ಯಕ್ರಮಕ್ಕೆ ಹಾಜರಾಗಲು ಕೇಂದ್ರ ಸಚಿವರು ಆಗಮಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
 
ಯುವ ಕಾಂಗ್ರೆಸ್ ಕಾರ್ಯಕರ್ತರು ಎಸೆದ ಮೊಟ್ಟೆಗಳು ಸಚಿವರಿಗೆ ತಾಗಲಿಲ್ಲ. ಆದಾಗ್ಯೂ ಒಂದೆರೆಡು ಮೊಟ್ಟೆಗಳು ಅವರ ವಾಹನದ ಮೇಲೆ ಬಿದ್ದಿವೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಲೋಕನಾಥ್ ಮಹಾರಥಿ ಸೇರಿದಂತೆ ಐವರು ಕಾಂಗ್ರೆಸ್ ಕಾರ್ಯಕರ್ತರನ್ನು 
ಮಧ್ಯಪ್ರದೇಶದಲ್ಲಿ ಬಿಜೆಪಿ ರೈತರು ಹತ್ಯೆಯಾದ ಬಳಿಕ ರೈತ ಮೋಹನ್ ಸಿಂಗ್ ಕೃಷಿ ಸಚಿವಾಲಯದ ಉಸ್ತುವಾರಿ ವಹಿಸಿಕೊಳ್ಳಲು ನೈತಿಕ ಹಕ್ಕನ್ನು ಹೊಂದಿಲ್ಲ ಎಂದು ಅವರು ಮಹಾರಾತಿ ಅವರನ್ನು ಬಂಧನಕ್ಕೆ ತೆಗೆದುಕೊಳ್ಳುವ ಮುನ್ನ ಹೇಳಿದರು.
 
ಮಧ್ಯಪ್ರದೇಶದ ಬಿಜೆಪಿ ಸರಕಾರ ರೈತರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಸಚಿವ ರಾಧಾಮೋಹನ್ ಸಿಂಗ್ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಹಾರಥಿ ವಾಗ್ದಾಳಿ ನಡೆಸಿದ್ದಾರೆ.
 
ಏತನ್ಮಧ್ಯೆ, ಘಟನೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ, ಇದಕ್ಕೆ ರಾಜ್ಯ ಸರಕಾರವೇ ನೇರ ಹೊಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
 
ದೇಶಾದ್ಯಂತ ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ, ಆಡಳಿತಾತ್ಮಕ ಬಿಜೆಡಿ ಪಕ್ಷವೇ ಮೊಟ್ಟೆಯನ್ನು ಎಸೆಯಲು ಕುಮ್ಮಕ್ಕು ನೀಡಿದೆ ಎಂದು ನಾನು ಭಾವಿಸುತ್ತಿದ್ದೇನೆ" ಎಂದು ಒಡಿಶಾ ಬಿಜೆಪಿ ನಾಯಕ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರ್ಕಾರದ ಮೂರು ವರ್ಷದ ಅವಧಿ ಭ್ರಷ್ಟಾಚಾರ ಮುಕ್ತ: ವೆಂಕಯ್ಯನಾಯ್ಡು