ಮುಂಬೈ: ಆನ್ ಲೈನ್ ಸೇಲ್ ಇತ್ತೀಚೆಗಿನ ದಿನಗಳಲ್ಲಿ ಜನಪ್ರಿಯವಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದಲ್ಲಿ ಇನ್ನು ಮುಂದೆ ಮದ್ಯಪಾನವನ್ನೂ ಆನ್ ಲೈನ್ ಮೂಲಕ ಸೇಲ್ ಮಾಡಲು ಹಸಿರು ನಿಶಾನೆ ತೋರಿದೆ.
ದಿನೇ ದಿನೇ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಆಪತ್ತು ತಂದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆನ್ ಲೈನ್ ಮೂಲಕ ಮದ್ಯ ಖರೀದಿಸಿ ಅದನ್ನು ಹೋಂ ಡೆಲಿವರಿ ಮೂಲಕ ಪಡೆದುಕೊಳ್ಳುವ ವ್ಯವಸ್ಥೆಗೆ ಒಪ್ಪಿಗೆ ನೀಡಿದೆ.
ಅಲ್ಲದೆ, ಆನ್ ಲೈನ್ ಮೂಲಕ ಮದ್ಯ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಆದಾಯವನ್ನೂ ಹೆಚ್ಚಿಸಬಹುದು ಎಂದು ಇದರ ಹಿಂದಿನ ಲೆಕ್ಕಾಚಾರವಂತೆ. ಸುಪ್ರೀಂಕೋರ್ಟ್ ಆದೇಶದ ನಂತರ ಹೆದ್ದಾರಿಗಳ ಸಮೀಪವಿರುವ ಹಲವು ಮದ್ಯದಂಗಡಿಗಳು ಮುಚ್ಚಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ನಷ್ಟವಾಗಿದೆ. ಅದನ್ನು ಈ ಮೂಲಕ ಸರಿಪಡಿಸಲು ಸರ್ಕಾರ ಮುಂದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.