Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಯಾ ಹತ್ಯೆಗೆತ್ನಿಸಿದವರಿಗೆ ಎಐಡಿಎಂಕೆ ನಾಯಕಿ ಪಟ್ಟ ಎಷ್ಟು ಸರಿ?

ಜಯಾ ಹತ್ಯೆಗೆತ್ನಿಸಿದವರಿಗೆ ಎಐಡಿಎಂಕೆ ನಾಯಕಿ ಪಟ್ಟ ಎಷ್ಟು ಸರಿ?
ಚೆನ್ನೈ , ಶುಕ್ರವಾರ, 16 ಡಿಸೆಂಬರ್ 2016 (12:04 IST)
ಜಯಲಲಿತಾ ಅವರ ಕೊಲೆಗೆತ್ನಿಸಿದ್ದ ಶಶಿಕಲಾ ನಟರಾಜನ್ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದ್ದು ತಪ್ಪು ಎಂದು ಪಕ್ಷದ ಉಚ್ಚಾಟಿತ ನಾಯಕಿ, ರಾಜ್ಯಸಭಾ ಸಂಸದೆ ಶಶಿಕಲಾ ಪುಷ್ಪಾ ಹೇಳಿದ್ದಾರೆ. 
ಪಕ್ಷದ ನಾಯಕಿ ಸ್ಥಾನಕ್ಕೆ ಚಿನ್ನಮ್ಮ( ಶಶಿಕಲಾ) ನಾಮನಿರ್ದೇಶನ ಸಂಪೂರ್ಣವಾಗಿ ತಪ್ಪು ನಿರ್ಧಾರ. ಮೇಡಮ್ ( ಜಯಲಲಿತಾ) ಎಲ್ಲಿ ಕೂಡ ಆಕೆಯ ಹೆಸರನ್ನು ತಮ್ಮ ಉತ್ತರಾಧಿಕಾರಿ ಸ್ಥಾನಕ್ಕೆ ಉಲ್ಲೇಖಿಸಿಲ್ಲ. ಆಕೆಗೆ ಕೌನ್ಸಲರ್ ಅಥವಾ ಎಮ್ಎಲ್ಎ ಸ್ಥಾನವನ್ನು ಕೂಡ ನೀಡಿರಲಿಲ್ಲ. ಇದು ಆಕೆಗೆ ರಾಜಕೀಯ ಜೀವನ ಹೊಂದುವುದಿಲ್ಲ ಎಂಬುದನ್ನು ತೋರಿಸುತ್ತದೆ. ತಮ್ಮ ವಿರುದ್ಧ ಪಿತೂರಿ ಮತ್ತು ಕೊಲೆ ಸಂಚು ಮಾಡಿದ್ದಾರೆ ಎಂಬ ಕಾರಣಕ್ಕೆ ಅಮ್ಮ ಅವರನ್ನು ಈ ಹಿಂದೆ ಪಕ್ಷದಂದ ವಜಾಗೊಳಿಸಿದ್ದರು ಎಂದಿದ್ದಾರೆ ಪುಷ್ಪಾ.
 
ಎಐಡಿಎಂಕೆಯಲ್ಲಿನ ಕಾನೂನನ್ನು ಉಲ್ಲೇಖಿಸಿದ ಅವರು, ಸತತ ಐದು ವರ್ಷಗಳ ಕಾಲ ಪಕ್ಷದಲ್ಲಿ ಪ್ರಾಥಮಿಕ ಸದಸ್ಯತ್ವವನ್ನು ಹೊಂದಿದ್ದವರು ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಪ್ರಾಥಮಿಕ ಸದಸ್ಯತ್ವ ಹೊಂದಿಲ್ಲದ ಶಶಿಕಲಾ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ. 
 
ಜಯಾ ಸಾವಿನ ತನಿಖೆಗೆ ಆಗ್ರಹಿಸಿದ ಪುಷ್ಪಾ, ಅಮ್ಮ ಆಸ್ಪತ್ರೆಗೆ ದಾಖಲಾದ ದಿನದಿಂದ ಆಕೆಯ ಸ್ಥಿತಿಯ ಬಗ್ಗೆ ಪಾರದರ್ಶಕತೆ ಇರಲಿಲ್ಲ. ಅವರಿಗೆ ಏನಾಯಿತು ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಿಗೂ ಇದೇ ಪ್ರಶ್ನೆ ಕಾಡುತ್ತಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಚುನಾವಣೆ ಪ್ರಜಾಪ್ರಭುತ್ವ ರೀತಿಯಲ್ಲಾಗಬೇಕೆಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿರುವುದಾಗಿ ಹೇಳಿದ್ದಾರೆ.
 
ಜಯಾ ಉತ್ತರಾಧಿಕಾರಿಯಾಗಿ ಅವರ ಆಪ್ತ ಸಖಿ ಶಶಿಕಲಾ ನಟರಾಜನ್ ಅವರನ್ನು ಸದದ್ಯದಲ್ಲಿಯೇ ಘೋಷಿಸುವುದಾಗಿ ಎಐಡಿಎಂಕೆ ಗುರುವಾರ ಹೇಳಿತ್ತು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರ ಮನೆ ಮೇಲೆ ಐಟಿ ದಾಳಿ ನಡೆದ್ರೂ ಸಿಎಂ ಆಪ್ತರೆಂದು ಏಕೆ ಬಿಂಬಿಸುತ್ತೀರಾ: ಸಿದ್ದರಾಮಯ್ಯ