ನವದೆಹಲಿ : ಕೊರೊನಾ ಸಂಕಷ್ಟ ಬಾರದಿದ್ದರೆ ಜೀವನದ ಬೆಲೆ ಅರಿವಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಬರದಿದ್ದರೆ ನಮಗೆ ಜೀವನ ಯಾಕೆ, ಏನು, ಹೇಗೆ ಅನ್ನೋ ಕಲ್ಪನೆಯೇ ನೆನಪಿಗೆ ಬರುತ್ತಿರಲಿಲ್ಲ. ಕೊರೊನಾದಿಂದ ಲಾಕ್ ಡೌನ್ ಮಾಡಿದ ಕಾರಣ ಜನರು ನಮ್ಮ ಪುರಾತನ ಸಂಸ್ಕೃತಿಯನ್ನು ತಿಳಿಯಲು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಅನ್ ಲಾಕ್ ನಲ್ಲಿ ಎರಡು ಮಹತ್ವದ ಜವಾಬ್ದಾರಿಗಳಿವೆ. ಒಂದು ಕೊರೊನಾ ಸೋಲಿಸುವುದು, ಮತ್ತೊಂದು ಆರ್ಥಿಕತೆ ಸುಧಾರಿಸುವುದು. ಹೀಗಾಗಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.