ಒಂದು ವೇಳೆ, ನಾನು ಹಣಕಾಸು ಸಚಿವನಾಗಿದ್ದಾಗ ನೋಟು ನಿಷೇಧ ಜಾರಿಗೊಳಿಸುವಂತೆ ಪ್ರಧಾನಿ ಆದೇಶ ನೀಡಿದ್ದಲ್ಲಿ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.
500 ಮತ್ತು 1000 ರೂ ನೋಟು ನಿಷೇಧ ಜಾರಿಗೊಳಿಸಲು ನಿರ್ಧರಿಸಿದ್ದೇನೆ ಎಂದು ಪ್ರಧಾನಮಂತ್ರಿ ನನಗೆ ಮಾಹಿತಿ ನೀಡಿದ್ದಲ್ಲಿ, ನಾನು ಅವರಿಗೆ ಇಂತಹ ನಿರ್ಧಾರ ತೆಗೆದುಕೊಳ್ಳದಿರುವ ಸಲಹೆ ನೀಡುತ್ತಿದ್ದೆ ಎಂದು ತಿಳಿಸಿದ್ದಾರೆ.
ನೋಟು ನಿಷೇಧದಿಂದ ಎದುರಾಗುವ ತೊಂದರೆಗಳ ಬಗ್ಗೆ ಅಂಕಿ ಅಂಶ ನೀಡುತ್ತಿದ್ದೆ. ಆದಾಗ್ಯೂ ನಾನು ನೋಟು ನಿಷೇಧ ಜಾರಿಗೊಳಿಸಿಯೇ ತೀರುತ್ತೇನೆ ಎಂದು ಪ್ರಧಾನಿ ಮುಂದುವರಿದಿದ್ದಲ್ಲಿ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ ಎಂದು ಹೇಳಿದ್ದಾರೆ.
ದೆಹಲಿ ಸಾಹಿತ್ಯ ಸಮ್ಮೆಳನದಲ್ಲಿ ಸಭಿಕರು ಪ್ರಶ್ನೆಯೊಂದನ್ನು ನೀಡಿ ಒಂದು ವೇಳೆ, ಸಚಿವ ಅರುಣ್ ಜೇಟ್ಲಿಯವರ ಸ್ಥಾನದಲ್ಲಿದ್ದಿದ್ರೆ ಏನು ಮಾಡುತ್ತಿದ್ದೀರಿ ಎನ್ನುವದಕ್ಕೆ ಸಚಿವ ಪಿ.ಚಿದಂಬರಂ ಉತ್ತರಿಸುತ್ತಿದ್ದರು.
ಕೇಂದ್ರ ಸರಕಾರದ ನೋಟು ನಿಷೇಧದಿಂದ ಭ್ರಷ್ಟಾಚಾರ, ನಕಲಿ ನೋಟು ನಿಯಂತ್ರಣ ಮತ್ತು ಕಪ್ಪು ಹಣವನ್ನು ನಿಯಂತ್ರಿಸಲು ಸಾಧ್ಯವಾಗದು. ಅಲ್ಪಾವಧಿಗೆ ನಗರ ಪ್ರದೇಶಗಳಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಯ ವಹಿವಾಟಿನಲ್ಲಿ ಹೆಚ್ಚಳವಾಗಬಹುದು ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.