ಆಗ್ರಾ : ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನಲೆಯಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ ಐ) ಇಂದು ಮಹಿಳೆಯರಿಗೆ ವಿಶೇಷವಾದ ಉಡುಗೊರೆಯನ್ನು ನೀಡಿದೆ.
ಎಲ್ಲಾ ಸಂರಕ್ಷಿತ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳಲ್ಲಿ ಭಾರತೀಯ ಮತ್ತು ವಿದೇಶಿ ಮಹಿಳಾ ಪ್ರವಾಸಿಗರಿಗೆ ಇಂದು ಉಚಿತ ಪ್ರವೇಶವನ್ನು ನೀಡಲಾಗುವುದು ಎಂದು ಎಎಸ್ ಐ ಜಂಟಿ ಮಹಾನಿರ್ದೇಶಕರು ತಿಳಿಸಿದ್ದಾರೆ. ಕಳೆದ ವರ್ಷ ಕೂಡ ಈ ಸೌಲಭ್ಯವನ್ನು ನೀಡಿದ್ದು, ಈ ವರ್ಷ ಕೂಡ ಅದನ್ನು ಮುಂದುವರಿಸಲಾಗಿದೆ.
ಹಾಗಾಗಿ ಆಗ್ರಾದ ತಾಜ್ ಮಹಲ್, ಆಗ್ರಾ ಕೋಟೆ, ಫತೇಪುರ್ ಸಿಕ್ರಿ ಸೇರಿದಂತೆ ಸ್ಮಾರಕಗಳನ್ನು , ನೆಲಮಾಳಿಗೆಯಲ್ಲಿರುವ ಷಹಜಹಾನ್ ಮತ್ತು ಮುಮ್ತಾಜ್ ಅವರ ನಿಜವಾದ ಸಮಾಧಿಗಳನ್ನು ಮಹಿಳೆಯರು ಇಂದು ಉಚಿತವಾಗಿ ನೋಡಬಹುದಾಗಿದೆ.