ಹೆಣ್ಣುಮಕ್ಕಳು ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ನ್ಯಾಪ್ ಕಿನ್ ಮೇಲೆ ಶೇ. 12ರಷ್ಟು ಜಿಎಸ್`ಟಿ ವಿಧಿಸಿರುವ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕುಂಕುಮ, ಬಳೆ ಸೇರಿದಂತೆ ಹಲವು ವಸ್ತುಗಳನ್ನ ಜಿಎಸ್`ಟಿಯಿಂದ ಹೊರಗಿಟ್ಟ ಮೋದಿ ಸ್ಯಾನಿಟರಿ ನ್ಯಾಪ್ ಕಿನ್ ಮೇಲೆ ಜಿಎಸ್`ಟಿ ಹೇರಿಕೆ ವಿರುದ್ಧ ಕ್ಯಾಂಪೇನ್ ಶುರುವಾಗಿದೆ.
ಟ್ವಿಟ್ಟರ್, ಫೇಸ್ಬುಕ್`ಗಳಲ್ಲಿ ಈ ಕುನರಿತಂತೆ ಕ್ಯಾಂಪೇನ್ ಶುರುವಾಗಿದ್ದು, ಪ್ರಧಾನಮಂತ್ರಿ ನರೇಂದ್ರಮೊದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಮಹಿಳೆಯರು ಮೇರಾ ನೇರ ಪ್ರಶ್ನಿಸಿದ್ದಾರೆ. ಮುಟ್ಟಿನ ಸಂದರ್ ಬಳಸುವ ಸ್ಯಾನಿಟರಿ ನ್ಯಾಪ್ ಕಿನ್ ಬಗ್ಗೆ ಈಗಲೂ ಹಲವೆಡೆ ಅರಿವು ಮೂಡಬೇಕಿದೆ. ಕುಗ್ರಾಮಗಳ ಕೆಲವೆಡೆ ಬಟ್ಟೆಗಳನ್ನ ಬಳಸಿ ಸೋಂಕಿನಂತಹ ಸಮಸ್ಯೆಗಳಿಗೆ ಮಹಿಳೆಯರು ತುತ್ತಾದ ಉದಾಹರಣೆಗಳಿವೆ.ಇಂಥಾ ಸಂದರ್ಭದಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಕೈಗೆಟುವ ರೀತಿ ಮಾಡಬೇಕಾದ್ದನ್ನ ಬಿಟ್ಟು, ಮೇಲೆ ತೆರಿಗೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಜಿಎಸ್`ಟಿ ಸಮಿತಿಯಲ್ಲಿ ಮಹಿಳೆಯರಿದ್ದಿದ್ದರೆ ಇದಕ್ಕೆ ಆಸ್ಪದವಿರುತ್ತಿರಲಿಲ್ಲ. ಮಹಿಳೆಯರಿಲ್ಲದೆ ಈ ನಿರ್ಧಾರ ಕೈಗೊಂಡ ಹಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆಗಸ್ಟ್ 5ರಂದು ಜಿಎಸ್`ಟಿ ಮಾರ್ಪಾಡು ಸಮಿತಿ ಸಭೆ ನಡೆಯಲಿದ್ದು, ಅಲ್ಲಿಯಾದರೂ ನ್ಯಾಪ್ ಕಿನ್ ಮೇಲೆ ಹೇರಿರುವ ತೆರಿಗೆ ಹಿಂಪಡೆಯಲಿ ಎಂಬ ಮಾತು ಕೇಳಿಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ