ತಿರುವನಂತಪುರಂ: ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಶಬರಿಮಲೆಗೆ ಋತುಮತಿಯಾಗುವ ವಯಸ್ಸಿನ ಮಹಿಳೆಯರೂ ಪ್ರವೇಶಿಸಬಹುದೆಂದು ಹೊರಟಿದ್ದ ಮಹಿಳೆಯರಿಗೆ ಮತ್ತೆ ಪ್ರತಿಭಟನಾಕಾರರು ತಡೆ ನೀಡಿದ್ದಾರೆ.
ಇಂದು ತೆಲಂಗಾಣ ಮೂಲದ ಒಬ್ಬ ಮಹಿಳಾ ಪತ್ರಕರ್ತೆ ಮತ್ತು ಮಹಿಳಾ ಕಾರ್ಯಕರ್ತೆಯೊಬ್ಬರು 100 ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯಲ್ಲಿ ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದರು. ಆದರೆ ಇವರನ್ನು ಪ್ರತಿಭಟನಾಕಾರರು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಲ್ಮೆಟ್ ಧರಿಸಿ ಹೊರಟಿದ್ದ ಇಬ್ಬರು ಮಹಿಳೆಯರು ಇಂದು ದೇಗುಲ ಪ್ರವೇಶಿಸಿದ್ದರೆ ಸುಪ್ರೀಂ ತೀರ್ಪಿನ ನಂತರ ದೇವಾಲಯ ಪ್ರವೇಶಿಸಿದ ಮೊದಲ ಮಹಿಳೆಯರು ಎಂಬ ದಾಖಲೆ ಇವರದಾಗುತ್ತಿತ್ತು. ಆದರೆ ಅದೀಗ ತಪ್ಪಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.