ನವದೆಹಲಿ : ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಭಾರೀ ಘೋಷಣೆಗಳನ್ನೇ ಮಾಡಲಾಗಿದೆ.ಮಧ್ಯಂತರ ಬಜೆಟ್ ಮಂಡಿಸಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್, ಮಹಿಳೆಯರು ಘನತೆಯಿಂದ ಬದುಕುವಂತೆ ಮಾಡಿರುವುದು ನಮ್ಮ ಹತ್ತು ವರ್ಷದ ಸಾಧನೆ ಎಂದರು.
• 30 ಕೋಟಿಗೂ ಹೆಚ್ಚು ಮಹಿಳೆಯರಿಗೆ ಉದ್ಯಮ ಆರಂಭಿಸಲು ಮುದ್ರಾ ಯೋಜನೆಯಡಿ ಸಾಲ ನೀಡಲಾಗಿದೆ.
• ಉನ್ನತ ವಿದ್ಯಾಭ್ಯಾಸದಲ್ಲಿ ಕಳೆದ ಹತ್ತುವರ್ಷಗಳ ಮಹಿಳೆಯರ ಸಾಧನೆ ಶೇ 28 ರಷ್ಟು ಹೆಚ್ಚಳವಾಗಿದೆ
• ಉದ್ಯೋಗ ಕ್ಷೇತ್ರದಲ್ಲಿಯೂ ಮಹಿಳೆಯರ ಪ್ರಮಾಣ ಶೇ 43 ರಷ್ಟು ಹೆಚ್ಚಳವಾಗಿದೆ.
• ಮಹಿಳೆಯರು ಸ್ವಾಭಿಮಾನದಿಂದ ಬದುಕಲು ತ್ರಿವಳಿ ತಲಾಖ್ ಗೆ ವಿದಾಯ ಹೇಳಲಾಗಿದೆ.
•
ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಭಾರತ್ ಯೋಜನೆಯನ್ನು ವಿಸ್ತರಿಸಲಾಗಿದೆ.
• ಗರ್ಭಿಣಿಯರು ಹಾಗೂ ಬಾಣಂತಿಯರ ಯೋಗಕ್ಷೇಮಕ್ಕಾಗಿ ಸಕ್ಷಮ ಅಂಗನವಾಡಿ ಪೋಷಣ 2.0 ಕಾರ್ಯಕ್ರಮ ಕೈಗೊಳ್ಳಲಾಗಿದೆ.
• U-Win ವೇದಿಕೆಯಡಿಯಲ್ಲಿ ಮಿಷನ್ ಇಂಧ್ರಧನುಷ್ ಎಂಬ ಯೋಜನೆ ರೂಪಿಸಲಾಗಿದೆ.
• ಲಖ್ ಪತಿ ದೀದಿ ಯೋಜನೆಯ ಅಡಿಯಲ್ಲಿ 83 ಎಸ್‌ಎಚ್‌ಜಿ ಗ ಳುಮತ್ತು 9 ಕೋಟಿ ಮಹಿಳೆಯರು ಸಹಾಯ ಪಡೆದಿದ್ದಾರೆ. ಈಗಾಗಲೇ ಒಂದು ಕೋಟಿ ಮಹಿಳೆಯರು ಫಲಾನುಭವಿಗಳಾಗಿದ್ದು, ಮುಂ ದಿನವರ್ಷದಲ್ಲಿ ಈ ಗುರಿತಯನ್ನು 2 ರಿಂದ 3 ಕೋಟಿಗೆ ಹೆಚ್ಚಿಸಲಾಗಿದೆ.