ನವದೆಹಲಿ: ತಾಂತ್ರಿಕವಾಗಿ ನಾವು ಇಂದು ಎಷ್ಟು ಮುಂದುವರಿದಿದ್ದೇವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿ. ಮಕ್ಕಳಾಗದ ದಂಪತಿಗಳು ವೈದ್ಯರ ಬಳಿ ಚಿಕಿತ್ಸೆಗೆ ಬರುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ಆಪ್ ಸಹಾಯದಿಂದ ಸಲಹೆ ಪಡೆದು ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕಾಶ್ಮೀರದ ಮಹಿಳೆಯೊಬ್ಬರು ಆಪ್ ಮೂಲಕ ದೆಹಲಿಯ ಗಂಗಾ ರಾಮ್ ಆಸ್ಪತ್ರೆಯ ವೈದ್ಯರ ಸಲಹೆ ಪಡೆದಿದ್ದಾರೆ. ಕಳೆದ ಏಳು ವರ್ಷಗಳಿಂದ ಮಕ್ಕಳಿಲ್ಲದೆ ಕೊರಗುತ್ತಿದ್ದ ಈ ಮಹಿಳೆ ಇದೀಗ ಗರ್ಭಿಣಿಯಾಗಿದ್ದಾರೆ.
ಐವಿಎಫ್ ಚಿಕಿತ್ಸೆಗೊಳಗಾದ ಬಳಿಕವೂ ಈ ಮಹಿಳೆಗೆ ದೆಹಲಿಗೆ ಬೇಕಾದಾಗಲೆಲ್ಲಾ ಬಂದು ವೈದ್ಯರನ್ನು ಭೇಟಿಯಾಗಲು ಆಗುತ್ತಿರಲಿಲ್ಲ. ಆ ಕಾರಣಕ್ಕೆ ವೈದ್ಯರು ಆಕೆಗೆ ‘ಮೈ ಫಾಲೋ ಅಪ್ ಆಪ್’ ಮೂಲಕ ಸ್ಮಾರ್ಟ್ ಫೋನ್ ನಿಂದೇ ಸಲಹೆ ಸೂಚನೆ ನೀಡಿದ್ದರು.ಇದೀಗ ಈ ರೀತಿ ಆಪ್ ಮೂಲಕ ಚಿಕಿತ್ಸೆ ನೀಡಿದ ಕೆಲವೇ ದಿನಗಳಲ್ಲಿ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ಖುಷಿಯಿಂದ ಹೇಳಿಕೊಂಡಿದ್ದಾರೆ. ಹೀಗೊಂದು ಆಪ್ ಎಲ್ಲಾ ಐಒಎಸ್ ಮತ್ತು ಆಂಡ್ರಾಯ್ಡ್ ಫೋನ್ ಗಳಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.