ನವದೆಹಲಿ: ದೇಶದಾದ್ಯಂತ ತ್ರಿವಳಿ ತಲಾಖ್ ಪದ್ಧತಿ ನಿಷೇಧಿಸಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಹಾಗಿದ್ದರೂ ತಲಾಖ್ ಪದ್ಧತಿ ಬಗ್ಗೆ ಹಲವು ಘಟನೆಗಳು ವರದಿಯಾಗುತ್ತಲೇ ಇವೆ.
ರಾಜ್ ಕೋಟ್ ಮೂಲದ 23 ವರ್ಷದ ಮಹಿಳೆ ರುಬಿನಾ ಎಂಬಾಕೆ ತನ್ನ ಗಂಡ ತಾನು ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ತ್ರಿವಳಿ ತಲಾಖ್ ನೀಡಿ ವೈವಾಹಿಕ ಜೀವನ ಮುರಿದುಕೊಂಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.
ಗಂಡ ತನಗೆ ಹೊಡೆದು ಹಿಂಸೆ ನೀಡಿರುವುದಲ್ಲದೆ, 3 ವರ್ಷದ ತಮ್ಮ ಪುತ್ರನೊಂದಿಗೆ ಮನೆಯಿಂದ ಹೊರ ಹಾಕಿದ್ದಾನೆಂದು ರುಬೀನಾ ದೂರಿನಲ್ಲಿ ತಿಳಿಸಿದ್ದಾಳೆ. ಐದು ವರ್ಷದ ಹಿಂದೆ ಅಫ್ಜಲ್ ಎಂಬಾತನೊಂದಿಗೆ ಈಕೆಗೆ ವಿವಾಹವಾಗಿತ್ತು. ಆದರೆ ಪತಿ ಅಫ್ಜಲ್ ದೈಹಿಕವಾಗಿ ಹಲ್ಲೆ ನಡೆಸಿದ ಕಾರಣಕ್ಕೆ ತಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಆಗ ಆತ ತಲಾಖ್ ನೀಡಿದ್ದಾನೆಂಬುದು ರುಬೀನಾ ದೂರು. ಪೊಲೀಸರು ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ