Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾರ್ ನಲ್ಲಿ ಡ್ಯಾನ್ಸ್ ಮಾಡಲು ಹೇಳಿದ್ದಕ್ಕೆ ನೊಂದ ಯುವತಿ ಆತ್ಮಹತ್ಯೆ

ಬಾರ್ ನಲ್ಲಿ ಡ್ಯಾನ್ಸ್ ಮಾಡಲು ಹೇಳಿದ್ದಕ್ಕೆ ನೊಂದ ಯುವತಿ ಆತ್ಮಹತ್ಯೆ
ನವದೆಹಲಿ , ಬುಧವಾರ, 15 ಡಿಸೆಂಬರ್ 2021 (09:25 IST)
ನವದೆಹಲಿ: ಬಾರ್ ನಲ್ಲಿ ನೃತ್ಯ ಮಾಡಲು ಮಾಲಿಕ ಒತ್ತಾಯ ಮಾಡಿದ್ದಕ್ಕೆ ಅಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.

ಈಕೆ ಮಾಲ್ ಒಂದರ ಬಾರ್ ನಲ್ಲಿ ಯುವತಿ ಮತ್ತು ಆಕೆಯ ಸಹೋದರಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಬಾರ್ ಮಾಲಿಕ ಆಕೆಗೆ ತನ್ನ ಜೊತೆ ನೃತ್ಯ ಮಾಡುವಂತೆ ಒತ್ತಾಯಿಸಿದ್ದ. ಇದು ಆಕೆಗೆ ತೀವ್ರ ನೋವು ತಂದಿತ್ತು.

ಇದರಿಂದಾಗಿ ಆಕೆ ಅದೇ ಬಾರ್ ನ ಕಟ್ಟಡದ ಮೇಲ್ಭಾಗದಿಂದ ಹಾರಿ ಜೀವ ಕಳೆದುಕೊಂಡಿದ್ದಾಳೆ. ಬಾರ್ ಮಾಲಿಕನ ಕಿರುಕುಳದ ಬಗ್ಗೆ ಸಹೋದರಿ ಪೊಲೀಸರಿಗೆ ವಿವರಿಸಿದ್ದಾಳೆ. ಈ ಸಂಬಂಧ ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಟೆಕ್ಕಿ!